ಅಫ್ಘಾನಿಸ್ತಾನ: ಅಪಹರಣಕ್ಕೆ ಒಳಗಾಗಿದ್ದ ಸುಮಾರು 150 ಭಾರತೀಯ ನಾಗರಿಕರನ್ನು ಬಿಡುಗಡೆ ತಾಲಿಬಾನಿಗಳು ಮಾಡಿದ್ದಾರೆ.ಸದ್ಯ ಅವರು ಕಾಬೂಲ್ ವಿಮಾನ ನಿಲ್ದಾಣದ ಒಳಗೆ ಇದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅವರನ್ನು ಶೀಘ್ರವೇ ಏರ್‌ಲಿಫ್ಟ್ ಮೂಲಕ ಅಫ್ಘಾನಿಸ್ತಾನದಿಂದ ಹೊರಲಾಗುವುದು ಎಂದು ವರದಿಯಲ್ಲಿ ಹೇಳಿದೆ.
ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಳ್ಳಲು ವಿಮಾನಗಳಿಗಾಗಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ
ಭಾರತೀಯ ನಾಗರಿಕರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಯಾಣ ದಾಖಲೆಗಳನ್ನು ಪರಿಶೀಲಿಸಲಾಗಿದೆ.ಅಪಹರಣ ಮಾಡಲಾಗಿಲ್ಲ ಎಂದು ಕಾಬೂಲ್ ನ ಮಾಧ್ಯಮವೊಂದು ತಿಳಿಸಿದೆ ಎಂದು ವರದಿಯಾಗಿದೆ.















