Coastal Bulletin

ಅಫಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆಯನ್ನು ಭಾರತ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಒಂದೇ ಒಂದು ಕಡೆ ಬಾಂಬ್ ಬ್ಲಾಸ್ಟ್ ಆಗಿಲ್ಲ. ಐಎಸ್‍ಐ ಉಗ್ರ ಸಂಘಟನೆ ಭಯೋತ್ಪಾದನೆ ಸೃಷ್ಟಿ ಮಾಡುವುದಕ್ಕೆ ಪ್ಲ್ಯಾನ್ ಮಾಡಿತ್ತು, ಆದರೆ ನಮ್ಮ ಭಾರತ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದೆ ಎಂದರು. ಯಾವುದೇ ದೇಶಗಳು ಕೈ ಹಾಕಿದರೇ ಭಾರತ ಸಮರ್ಥವಾಗಿ ಉತ್ತರ ನೀಡಲಿದೆ ಎಂದರು. ಇನ್ನೂ ನಮ್ಮ ರಾಜ್ಯದಲ್ಲಿರುವವರನ್ನು ಕರೆತರುವ ಪ್ರತಯ್ನ ಮಾಡಲಾಗುತ್ತಿದೆ ಎಂದರು.


ಅಫಘಾನಿಸ್ತಾನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಏನನ್ನು ಹೇಳಬೇಕೋ, ಅದು ಹೇಳುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ

ಸಂಪೂರ್ಣ ಮೌನ ತಾಳಿದೆ. ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಗೆ ವಿಷಯಗಳೇ ಇಲ್ಲ ಎಂದರು. ಸಿಎಎ,ಎನ್‍ಆರ್‍ಸಿ ಸೇರಿದಂತೆ ಪ್ರತಿಯೊಂದು ವಿಷಯಗಳಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜನರ ಮಧ್ಯೆ ಬೆಂಕಿ ಹಚ್ಚಿಸುವ ಕೆಲಸ ನಿರಂತರ ಮಾಡುತ್ತಿದೆ ಎಂದರು.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಾಗುತ್ತಿದೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದರು. ಬೆಳಗಾವಿ,ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ 25 ವರ್ಷದಿಂದ ಪಕ್ಷದ ಚಿಹ್ನೆ ಅಡಿಯಲ್ಲಿ ನಿಂತಿಲ್ಲ. ಆದರೆ ಈ ಬಾರಿ ಚಿಹ್ನೆ ಅಡಿಯಲ್ಲಿ ಅಖಾಡಕ್ಕೆ ??

Leave a Comment