Coastal Bulletin

ರಾಜ್ಯದಲ್ಲಿ ಕೊರೊನಾ ನಡುವೆ ಬ್ಲ್ಯಾಕ್ ಫಂಗಸ್ ಆತಂಕ ಸೃಷ್ಟಿಸುತ್ತಿದೆ. ಕೊರೊನಾ ಕೇಸ್ ಇಳಿಕೆಯಾದ್ರೂ ಬ್ಲ್ಯಾಕ್ ಫಂಗಸ್ ಪ್ರಕರಣ ಏರಿಕೆಯಾಗುತ್ತಿದೆ.

ರಾಜ್ಯದಲ್ಲಿ ಈವರೆಗೂ ಒಟ್ಟು 3,832 ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲಾಗಿವೆ.ಬೆಂಗಳೂರಿನಲ್ಲೇ 1,207 ಬ್ಲ್ಯಾಕ್ ಫಂಗಸ್ ಕೇಸ್‌ಗಳಿವೆ. ರಾಜ್ಯದಲ್ಲಿ ದಿನಕ್ಕೆ 8 ಹೊಸ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗುತ್ತಿವೆ. ಬ್ಲ್ಯಾಕ್ ಫಂಗಸ್‌ನಿಂದ ಈವರೆಗೆ 441 ಮಂದಿಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿಯೇ

ಅತ್ಯಧಿಕ 149 ಮಂದಿ ಪ್ರಾಣತೆತ್ತಿದ್ದಾರೆ. ಧಾರವಾಡದಲ್ಲಿ 40, ಬಳ್ಳಾರಿ 28, ದಕ್ಷಿಣ ಕನ್ನಡ 25 , ಕಲಬುರ್ಗಿ 24 ಮಂದಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Leave a Comment