ಮಂಗಳೂರು: ನಗರದ ಕುಡುಪಾಡಿ ಬಳಿ ಶನಿವಾರ ಬೆಳಗ್ಗೆ ರೈಲು ಢಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.ನಗರದ ಮಹಾಕಾಳಿಪಡ್ಪು ಬಳಿಯ ಕುಡ್ಪಾಡಿಯಲ್ಲಿ ಬೆಳಗ್ಗೆ ರೈಲ್ವೆ ಟ್ರ್ಯಾಕ್ ಕ್ರಾಸ್ ಮಾಡುವಾಗ ಅವಘಡ ಸಂಭವಿಸಿದೆ.
ವಸಂತಿ (50) ಮತ್ತು ಪ್ರೇಮಾ (48)ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ಬೀಡಿ ಕಾರ್ಮಿಕರಾಗಿದ್ದು, ಬೀಡಿ ಬ್ರ್ಯಾಂಚ್ ಗೆ ಬೀಡಿ ಕೊಂಡೊಯ್ಯುತ್ತಿರುವಾಗ ಅಪಘಾತ ನಡೆದಿದೆ.
ಹಳಿ ದಾಟುತ್ತಿದ್ದಾಗ ಕೇರಳ ಕಡೆಯಿಂದ ಮಂಗಳೂರಿಗೆ
ಬರುತ್ತಿದ್ದ ರೈಲು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಢಿಕ್ಕಿ ರಭಸಕ್ಕೆ ಮಹಿಳೆಯರ ಎರಡು ಕಾಲುಗಳು ತುಂಡಾಗಿ ಸಾವು ಸಂಭವಿಸಿದೆ.
ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














