ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಒಟ್ಟು 58 ವಾರ್ಡ್ ಗಳ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳನ್ನು ಗೆದ್ದು ಅಧಿಕಾರ ಪಡೆಯುವುದನ್ನು ಖಚಿತಪಡಿಸಿಕೊಂಡಿದೆ.ಬೆಳಗಾವಿ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಸ್ಪಷ್ಟ ಬಹುಮತ ಪಡೆದಿದ್ದು ಎಂಇಎಸ್ ಖಾತೆ ತೆರೆಯದೆ ಧೂಳೀಪಟವಾಗಿದೆ. ಬಿಜೆಪಿ 36, ಕಾಂಗ್ರೆಸ್ 9, ಜೆಡಿಎಸ್ 0, ಇತರರು 13 ಸ್ಥಾನ ಪಡೆದಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಪಾಲಿಕೆಯ 55 ವಾರ್ಡ್‌ಗಲ್ಲಿ ಕಾಂಗ್ರೆಸ್ 26 ಸ್ಥಾನ ಗೆದ್ದು ಮೊದಲ ಸ್ಥಾನದಲ್ಲಿದೆಯಾದರೂ ಮೇಯರ್ ಸ್ಥಾನ ಅಲಂಕರಿಸಲು ಇನ್ನೂ ಇಬ್ಬರು ವಿಜೇತರು ಕಾಂಗ್ರೆಸ್‌ಗೆ ಮತ ಹಾಕಬೇಕಿದೆ. ಬಿಜೆಪಿ 23 ವಾರ್ಡ್‌ಗಳಲ್ಲಿ ಗೆದ್ದರೆ, ಜೆಡಿಎಸ್ 3 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ.ಅತಂತ್ರ ಫಲಿತಾಂಶ ಬಂದಿದ್ದು ಪಕ್ಷೇತರ ಅಭ್ಯರ್ಥಿಗಳೇ ಈಗ ನಿರ್ಣಾಯಕ, ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲು 45 ಮತ ಬೇಕಿದೆ. ಆದರೆ, ಬಿಜೆಪಿ ಒಟ್ಟು 39 ವಾರ್ಡ್‌ಗಳಲ್ಲಿ ಗೆದ್ದಿದ್ದು, ಬಿಜೆಪಿ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಐವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಬಿಜೆಪಿಗೆ ಒಟ್ಟು 44 ಸ್ಥಾನ ಸಿಕ್ಕಂತಾಗುತ್ತೆ. ಇನ್ನೂ ಒಬ್ಬರ ಅಗತ್ಯವಿದೆ.















