Coastal Bulletin

ಮುಂಬೈ : ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಮಲೈಕಾ ಅರೋರಾಗೆ ಗಾಯಗಳಾಗಿವೆ.

ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ 38 ಕಿ.ಮೀ ಪಾಯಿಂಟ್ನಲ್ಲಿ ಅಪಘಾತ ಸಂಭವಿಸಿದ್ದು, ಸದ್ಯಕ್ಕೆ ಸಣ್ಣಪುಟ್ಟ ಗಾಯಗೊಂಡ ನಟಿಯನ್ನು ಚಿಕಿತ್ಸೆಗಾಗಿ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ

ಮತ್ತು ಎಲ್ಲಾ ಮೂರು ವಾಹನಗಳು ಹಾನಿಗೊಳಗಾಗಿವೆ. ಅಪಘಾತದ ನಂತರ ವಾಹನ ಚಾಲಕರು ಪರಾರಿಯಾಗಿದ್ದಾರೆ. ಅಪಘಾತದ ತನಿಖೆ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದು ಖೋಪೋಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿರೀಶ್ ಪವಾರ್ ತಿಳಿಸಿದ್ದಾರೆ


Leave a Comment