Coastal Bulletin

ಬೆಂಗಳೂರು: ‘ಕೆ.ಜಿ.ಎಫ್: 2’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ, ಅಷ್ಟೇ ಅಲ್ಲದೆ ದಿನದಿಂದ ದಿನಕ್ಕೆ ಈ ಚಿತ್ರದ ಮೇಲಿನ ಕ್ರೇಜ್ ಜಾಸ್ತಿ ಆಗುತ್ತಲೇ ಇದೆ.

ಬಾಹುಬಲಿ ಮತ್ತು ಸ್ಪೈಡರ್ ಮ್ಯಾನ್‌ನಂತಹ ಚಿತ್ರಗಳ ಈ ಹಿಂದಿನ ಮುಂಗಡ ಬುಕ್ಕಿಂಗ್‌ ದಾಖಲೆಯನ್ನು ಕನ್ನಡದ ಈ ಚಿತ್ರ ಹಿಂದಿಕ್ಕುವತ್ತ ಸಾಗುತ್ತಿದೆ.ಈಗಾಗಲೇ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಟ್ರೇಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಚಿತ್ರದ ಪ್ರಚಾರಕ್ಕಾಗಿ ಕೆಜಿಎಫ್ ತಂಡವು ಈಗ ದೇಶಾದ್ಯಂತ ಪ್ರಯಾಣ ಬೆಳೆಸುತ್ತಿದೆ.

ಭಾರೀ ನಿರೀಕ್ಷೆ ಇಟ್ಟುಕೊಂಡಿರುವ 'ಕೆಜಿಎಫ್​: ಚಾಪ್ಟರ್​ 2'  ಸಿನಿಮಾ ತೆರೆಗೆ ಬಂದಿದೆ. ಮೊದಲ ದಿನ, ಮೊದಲ ಶೋ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳು ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದಾರೆ. ಕಷ್ಟಪಟ್ಟು ಫಸ್ಟ್​ ಶೋ ಟಿಕೆಟ್​ ಗಿಟ್ಟಿಸಿಕೊಂಡು ಸಿನಿಮಾ ನೋಡಿದ್ದಾರೆ. ದೇಶಾದ್ಯಂತ ಈ

ಸಿನಿಮಾ ಧೂಳೆಬ್ಬಿಸುತ್ತಿದೆ. ಮಧ್ಯರಾತ್ರಿಯೇ ಪ್ರೇಕ್ಷಕರು ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. 

'ಕೆಜಿಎಫ್​: ಚಾಪ್ಟರ್​ 2' ಸಿನಿಮಾ. ವಿಶ್ವಾದ್ಯಂತ 10 ಸಾವಿರಕ್ಕೂ ಅಧಿಕ ಪರದೆಯಲ್ಲಿ ಈ ಚಿತ್ರವನ್ನು ತೆರೆಕಾಣಿಸಲಾಗಿದೆ. ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾ ರಾಜ್ಯದ 550 ಹೆಚ್ಚು ಥಿಯೇಟರ್ ನಲ್ಲಿ ಏಕಕಾಲದಲ್ಲಿ‌ ತೆರೆ ಕಾಣಲಿದೆ.

ಬುಕ್ ಮೈ ಶೋ ಮತ್ತು ಪೇಟಿಎಂ ಮೂಲಕ  ಈ ಚಿತ್ರದ 40 ಲಕ್ಷ ಅಡ್ವಾನ್ಸ್ ಟೀಕೆಟ್  ಗಳು ಸೋಲ್ಡ್ ಔಟ್ ಆಗಿರುವುದು ಹೆಮ್ಮೆಯ ಸಂಗತಿ. ಈ ಚಿತ್ರ ಐದು ಭಾಷೆಯಲ್ಲಿ ತೆರೆ ಬಂದಿದೆ.

Leave a Comment