Coastal Bulletin

ಬಾಲಿವುಡ್ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಭಾನುವಾರ ಪಾರ್ಟಿ ಮಾಡುವಾಗ ಡ್ರಗ್ಸ್‌ ಸೇವಿಸುತ್ತಿದ್ದರು ಎಂದು ಪೊಲೀಸರು ಬಂಧಿಸಿದ್ದಾರೆ.

ಎಂಜಿ ರಸ್ತೆಯ ಹೋಟೆಲ್‌ವೊಂದರಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ 50 ಮಂದಿ ಭಾಗಿಯಾಗಿದ್ದರು ಅವರಲ್ಲಿ 35 ವ್ಯಕ್ತಿಗಳ ಸ್ಯಾಂಪಲ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು. 35 ಸ್ಯಾಂಪಲ್‌ಗಳಲ್ಲಿ 6 ಸ್ಯಾಂಪಲ್ ಪಾಸಿಟಿವ್ ಬಂದಿದೆ ಅದರಲ್ಲಿ ನಟ ಸಿದ್ದಾಂತ್ ಕಪೂರ್ ಕೂಡ ಒಬ್ಬರು ಎನ್ನಲಾಗಿದೆ.  ಮೊದಲೇ ಡ್ರೆಗ್ಸ್‌ ಸೇವಿಸಿ ಪಾರ್ಟಿಗೆ ಬಂದಿರಬಹುದು ಇಲ್ಲವಾದರೆ ಪಾರ್ಟಿಗೆ ಬಂದು ಸೇವಿಸಿರಬೇಕು ಇದರ

ಬಗ್ಗೆ ಸ್ಪಷನೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಅಖೀಲ್ ಸೋನಿ, ಅಜೋದ್‌ ಸಿಂಗ್ ಪಂಜಾಬ್‌, ಅಖೀಲ್, ಅನಿ, ದರ್ಶನ ಸುರೇಶ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರು ಟೆಕ್ಕಿಗಳಾಗಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

2020ರಲ್ಲಿ ಬಿಡುಗಡೆಯಾದ ಬಕುಲ ವೆಬ್‌ ಸೀರಿಸ್‌ನಲ್ಲಿ ಚಿಂಟು ಪಾತ್ರದಲ್ಲಿ ಸಿದ್ಧಾರ್ಥ್‌ ಅಭಿನಯಿಸಿದ್ದಾರೆ. ಕೆಲವು ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Leave a Comment