Coastal Bulletin

777 ಚಾರ್ಲಿ' ರಿಲೀಸ್‌ ಆಗಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಳ್ಳೆಯ ಕಥೆ ಜೊತೆ ಬರುವ ರಕ್ಷಿತ್ ಶೆಟ್ಟಿ ಈ ಸಲ ಒಂದು ನಾಯಿಯ ಜೊತೆಗಿನ ಕಥೆ ಹೇಳಿದ್ದಾರೆ.‌ ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ ಈ '777 ಚಾರ್ಲಿ' ಎನ್ನಬಹುದು. ರಕ್ಷಿತ್ ಮತ್ತು ಕಿರಣ್‌ರಾಜ್ ಕಾಂಬಿನೇಷನ್‌ನಲ್ಲಿ ಶುರುವಾದ '777 ಚಾರ್ಲಿ' ಮೇಲೆ ಆರಂಭದಿಂದಲೂ ಒಂದು ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆ ನಿರೀಕ್ಷೆ ಈಗ ಗೆದ್ದಿದೆ ಎಂದರೆ ತಪ್ಪಾಗಲಾರದು.

ಧರ್ಮನಿಗೆ  ಅಪ್ಪ-ಅಮ್ಮ ಯಾರೂ ಇಲ್ಲ. ಆತ ಅನಾಥನಾಗುವುದಕ್ಕೂ ಒಂದು ಕಾರಣ ಇದೆ. ಶಿಸ್ತಿನ ಬದುಕು ಅವನದ್ದಲ್ಲ. ಯಂತ್ರಗಳ ಜೊತೆಗೆ ಕೆಲಸ ಮಾಡುವ ಅವನದ್ದು ಒಂಥರಾ ಯಾಂತ್ರಿಕ ಬದುಕು. 10 ವರ್ಷಗಳಾದ್ರೂ ಅವನ ಮನೆ ಕ್ಯಾಲೆಂಡರ್ ಬದಲಾಗಿರುವುದಿಲ್ಲ. ಪುಟ್ಟ ಮಕ್ಕಳ ಬಾಯಲ್ಲಿ ಹಿಟ್ಲರ್ ಎಂದರೆ ಕರೆಸಿಕೊಳ್ಳುವ, ಅಕ್ಕ ಪಕ್ಕದ ಮನೆಯವರನ್ನು ಕಂಡರೆ ನೋಟದಲ್ಲೇ ಕೆಂಡಕಾರುವ ಧರ್ಮನ ಬದುಕಿಗೆ ಚಾರ್ಲಿ ಪ್ರವೇಶ ನೀಡುತ್ತಾಳೆ. ಅಲ್ಲಿಂದ ಆತನ ಬದುಕಿನ ಲಯವೇ ಬದಲಾಗಿಬಿಡುತ್ತದೆ. ಸೂತಕದ ಮನೆಯಂತಿದ್ದ ಧರ್ಮನ ಬದುಕಿನ ಲವಲವಿಕೆ ಮೂಡುತ್ತದೆ. ಆದರೆ ಅಷ್ಟರಲ್ಲೇ ಒಂದು ದೊಡ್ಡ ತಿರುವಿನ ಹಾದಿಗೆ

ಧರ್ಮ ಮತ್ತು ಚಾರ್ಲಿ ಬಂದು ನಿಂತಿರುತ್ತಾರೆ. ಆ ತಿರುವು ಏನು? ಚಾರ್ಲಿ ಜೊತೆಗೆ ಕಾಶ್ಮೀರದ ತನಕ ಧರ್ಮ ಪ್ರಯಾಣ ಆರಂಭಿಸುವುದೇಕೆ? ಆ ಪ್ರಯಾಣದ ಹಾದಿಯಲ್ಲಿ ಏನೆಲ್ಲ ಸವಾಲುಗಳು ಬರುತ್ತವೆ ಅನ್ನೋದೇ '777 ಚಾರ್ಲಿ'ಯ ಕಥೆ.

ಅಲ್ಲದೇ ಕಿರಣ್‌ರಾಜ್ ಬರೆದಿರುವ ಈ ಕಥೆ ತಿರುವುಗಳನ್ನು ಹೊಂದದೆ, ತುಂಬಾನೇ ಸರಳವಾಗಿದೆ. ಜೊತೆಗೆ ಚಾರ್ಲಿಯನ್ನು ನಟಿಸುವಂತೆ ಮಾಡಿಸಿ, ಎಮೋಷನ್ಸ್ ಕ್ಯಾಪ್ಚರ್ ಮಾಡಿರುವುದು ಒಳ್ಳೆಯ ಸಂಗತಿ. ಅರವಿಂದ್‌ ಕಶ್ಯಪ್‌ರ ಛಾಯಾಗ್ರಹಣದ ಸೊಗಸಿನೊಂದಿಗೆ ಹಾಗೂ ನೋಬಿನ್‌ ಪೌಲ್‌ರ ಅತ್ಯದ್ಭುತ ಹಿನ್ನೆಲೆ ಸಂಗೀತ ಸಹಾಯದೊಂದಿಗೆ ತೆರೆಮೇಲೆ ಚಾರ್ಲಿಯ ಎಮೋಷನಲ್ ಜರ್ನಿಯನ್ನು ಸೃಷ್ಟಿಸುವಲ್ಲಿ ಕಿರಣ್‌ರಾಜ್ ಭಾಗಶಃ ಗೆದ್ದಿದ್ದಾರೆ.

Leave a Comment