ಕನ್ನಡ ಕಿರುತೆರೆಯ ಜನಪ್ರಿಯ ಗಾಯಕಿಯಾಗಿ ಕಾಣಿಸಿಕೊಂಡ ಪುತ್ತೂರಿನ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಕೋಗಿಲೆ ಸಂಗೀತ ರಿಯಾಲಿಟಿ ಶೋ ಮೂಲಕ ಗಾಯಕಿಯಾಗಿ ಕನ್ನಡ ಕಿರುತೆರೆಯಲ್ಲಿ ಪಯಣ ಶುರು ಮಾಡಿದ ಅಖಿಲಾ ಪಜಿಮಣ್ಣು ಫೆಬ್ರವರಿ 2ರಂದು ಮಂಗಳೂರಿನಲ್ಲಿ ಆಪ್ತರ ಸಮ್ಮುಖದಲ್ಲಿ ಧನಂಜಯ್ ಶರ್ಮಾರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಮಂಗಳೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿಮ್ಮ ಜೊತೆ ಪ್ರತಿಯೊಂದು ಕ್ಷಣವನ್ನು ನೆನಪುಗಳಾಗಿ ಉಳಿಸಿಕೊಳ್ಳಲು ಇಷ್ಟ ಪಡುತ್ತೀನಿ. ನಮ್ಮ ಕಣ್ಣುಗಳು ಹೆಚ್ಚಿಗೆ ಮಾತನಾಡಲಿ. ಕಣ್ಣಿಗೆ ಕಾಣಿಸದ ವಿಚಾರಗಳು ಮನಸ್ಸಿಗೆ ಅರ್ಥವಾಗುತ್ತದೆ' ಎಂದು
ಅಖಿಲಾ ಇನ್‌ಸ್ಟಾಗ್ರಾಂನಲ್ಲಿ ಬರೆದು, ಪೋಸ್ಟ್ ಮಾಡಿದ್ದಾರೆ.
ತಮ್ಮ ಸುಮಧುರವಾದ ಕಂಠದಿಂದ ಹಲವು ಅಭಿಮಾನಿಗಳನ್ನು ಪಡೆದುಕೊಂಡ ಇವರು ಸದ್ಯಕ್ಕೆ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸುತ್ತಿದ್ದಾರೆ.














