Coastal Bulletin

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ 10ರಂದು ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ನೇತೃತ್ವದಲ್ಲಿ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು , ಸಂಸದ ನಳಿನ್ ಕುಮಾರ್ ಕಟೀಲು ಶುಕ್ರವಾರ ಸಂಜೆ ಭೇಟಿ ನೀಡಿದರು.

ಇದೇ ವೇಳೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರುಗೊಳಿಸಿದ ರೂ 50ಲಕ್ಷ ವೆಚ್ಚದ ತಡೆಗೋಡೆ ಮತ್ತು ತೀರ್ಥಕೆರೆ ಕಾಮಗಾರಿ ವೀಕ್ಷಿಸಿದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಸುಂದರ ಹೊಳ್ಳ ದೇವಳದ ಹಿನ್ನೆಲೆ ವಿವರಿಸಿದರು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಎಸ್.ಹೊಳ್ಳ ಪತ್ತುಮುಡಿ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಮಾಜಿ ಅಧ್ಯಕ್ಷರಾದ ಬಿ.ದಯಾನಂದ ಸಪಲ್ಯ, ಹರೀಶ ಆಚಾರ್ಯ, ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ಉದಯ ಕುಮಾರ್ ರಾವ್,

ರಮಾನಾಥ ರಾಯಿ. ಡೊಂಬಯ ಬಿ.ಅರಳ, ರಾಜೇಶ ಗೋವಿಂದಬೆಟ್ಟ, ಶರತ್ ಕುಮಾರ್ ಕೊಯಿಲ, ಆನಂದ ಬುರಾಲು, ಯಮುನಾ ತಿಮ್ಮಪ್ಪ ಪೂಜಾರಿ, ನಳಿನಾಕ್ಷಿ ಮೋಹನ ಬದನಡಿ, ಸಂತೋಷ್ ಕುಮಾರ್ ಬೆಟ್ಟು, ಪ್ರಭಾಕರ ಪ್ರಭು ಕರ್ಪೆ , ದಿನೇಶ ಸುವರ್ಣ ರಾಯಿ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಮೋಹನ್ ಕೆ.ಶ್ರೀಯಾನ್ ರಾಯಿ, ವಸಂತ ಗೌಡ ಮುದ್ದಾಜೆ, ಜಿ.ಸುಂದರ ಭಂಡಾರಿ, ಚಂದ್ರಶೇಖರ ಗೌಡ ಕಾರಂಬಡೆ, ಪ್ರವೀಣ ಅಂಚನ್ ಕೊಯಿಲ, ಕೆ.ಪರಮೇಶ್ವರ ಪೂಜಾರಿ, ಯೋಗೀಶ ಎಲ್ಪೇಲು, ಉಮೇಶ ಗೌಡ ಮಂಚಕಲ್ಲು, ಉಮೇಶ ಡಿ.ಎಂ.ಅರಳ, ಮಧುಕರ ಬಂಗೇರ, ಚಂದಪ್ಪ ಮೂಲ್ಯ, ಸಂದೇಶ ಮಡಿವಾಳ, ಜಗದೀಶ ಕೊಯಿಲ, ಅವಿನಾಶ್ ಅಂತರ, ಸುಕೇಶ ಚಿಂಗಲಚ್ಚಿಲ್, ಅರ್ಚಕ ನಾಗೇಶ ರಾವ್ ಮತ್ತಿತರರು ಇದ್ದರು.

Leave a Comment