ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಗೋವಿನ ತೋಟದ ರಾಧಾ ಸುರಭಿ ಗೋ ಮಂದಿರದ ಗುರೂಜೀ ಭಕ್ತಿ ಭೂಷಣ್ ಪ್ರಭು ಇವರ ಮಾರ್ಗದರ್ಶನದಲ್ಲಿ ರಾಧ ಸುರಭಿ ಗೋ ಆರ್ಗನಿಕ್ ಪ್ರೊಡಕ್ಟ್,"ಗವ್ಯಾಮೃತ ಹೆಲ್ತ್ ಡ್ರಿಂಕ್" ರಾಸಾಯನಿಕ ಮುಕ್ತವಾದ ತಂಪು ಪಾನೀಯಗಳು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು,ಬಹಳ ಬೇಡಿಕೆಯನ್ನು ಪಡೆದಿದೆ.
ಪ್ರಸ್ತುತ ಕಾಲ ಘಟ್ಟದಲ್ಲಿ ರಾಸಾಯನಿಕಯುಕ್ತ ಆಹಾರ ಪದಾರ್ಥಗಳು, ಲಘು ಪಾನೀಯಗಳು ಮಾರುಕಟ್ಟೆಯಲ್ಲಿ ತುಂಬಿಹೋಗಿದ್ದು, ನಮ್ಮ ಪಾರಂಪರಿಕ, ಪ್ರಾದೇಶಿಕ ಆಹಾರ ಪದ್ಧತಿಗಳು ವಿರಳವಾಗುತ್ತಿರುವ ಈ ಸಂದರ್ಭದಲ್ಲಿ ,ಆಯುರ್ವೇದದಿಂದ ಕೂಡಿದ, ಕೆಮಿಕಲ್ ರಹಿತ,ಔಷಧಿಯ ಗುಣವುಳ್ಳ,ಸುಮಾರು 10ವರ್ಷಗಳ ಸಂಶೋಧನೆಯ ಫಲವಾಗಿ ಈ ಗೋ ಆರ್ಗನಿಕ್ ಪ್ರೊಡಕ್ಟ್ ಗಳು ಮಾರುಕಟ್ಟೆಗೆ ಬಂದಿದೆ.
ರಾಧಾ ಸುರಭಿ ಗೋ ಅರ್ಗಾನಿಕ್ ತಂಪು ಪಾನೀಯಗಳು 5 ಬಗೆಯ ಗಿಡಮೂಲಿಕೆಗಳು ಹಾಗೂ ನೈಜವಾದ ಜೀರಿಗೆ
ಕಲ್ಲುಸಕ್ಕರೆಯಿಂದ ತಯಾರಿಸಲ್ಪಟ್ಟ ನೈಸರ್ಗಿಕಯುಕ್ತ, ಔಷಧಿಯ ಗುಣವುಳ್ಳ ಅಮೃತ ಜೀರ ಹಾಗೂ ಇತರ ಉತ್ಪನ್ನಗಳಾದ ಅಮೃತ ಜಿಂಜರ್,ಅಮೃತ ಲೈಮ್, ಅಮೃತ ಗೋಲಿಸೋಡ, ಅಮೃತ ಕ್ಲಬ್ ಸೋಡ. ಮಾರುಕಟ್ಟೆಗೆ ಬಂದಿದ್ದು ಈಗಾಗಲೇ ತುಂಬಾ ಬೇಡಿಕೆಯನ್ನು ಪಡೆದಿದೆ.
ಧೀರಜ್ ಶೆಟ್ಟಿ ಬಾಂಬೆ,ಹಾಗೂ ಪ್ರಸಾದ್ ಮಂಗಳೂರು ಇವರು ಈ ಉತ್ಪನ್ನದ ನೇತೃತ್ವವನ್ನು ವಹಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ , ಬಂಟ್ವಾಳ ತಾಲೂಕಿಗೆ ಪುರುಷೋತ್ತಮ್ ಹೊಳ್ಳರಬೈಲು (ಮೋ:9845221894) ಇವರು ಅಧಿಕೃತ ವಿತರಕಾರಗಿದ್ದಾರೆ.














