ಬಂಟ್ವಾಳ : ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಬ್ಯಾಂಕ್ ನ ಅಧ್ಯಕ್ಷ ಕರುಣೇಂದ್ರ ಎಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸಕ್ತ ವರ್ಷದಲ್ಲಿ ಬ್ಯಾಂಕ್ 262 ಕೋಟಿ ವ್ಯವಹಾರ ನಡೆಸಿ, 72 ಲಕ್ಷ ಲಾಭ ಗಳಿಸಿದೆ.3 ಕೋಟಿ ಪಾಲು ಬಂಡವಾಳ ಹೊಂದಿದ್ದು 39.25 ಕೋಟಿ ಠೇವಣಿ ಹೊಂದಿದೆ ಎಂದು ಅವರು ಹೇಳಿದರು.
ಈಗಾಗಲೇ ಕೈಕಂಬದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ವಂತ ಕಟ್ಟಡದ ಉದ್ಘಾಟನೆ ನಡೆದಿದೆ. ಮುಂದೆ ಇದೇ ರೀತಿಯಲ್ಲಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಿಬ್ಬಂದಿಗಳು ಹಾಗೂ ಸರ್ವ ಸದಸ್ಯರ ಸಹಕಾರ ನಿರಂತರವಾಗಿ ಇರಲಿ ಎಂದು ಅವರು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್
ಕಾಮತ್ ವರದಿ ವಾಚಿಸಿದರು.ನವೋದಯ ಸ್ವಸಹಾಯ ಸಂಘದ ಗುಂಪುಗಳಿಗೆ ಲಾಭಾಂಶ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ.ಪಿಯುಸಿ, ಪದವಿ ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬಿ.ಜಯ, ವಿಠಲ ಪೂಜಾರಿ, ಮುರಳೀಧರ ಭಟ್, ಚಂದ್ರಶೇಖರ್ ಭಂಡಾರಿ, ದಿವಾಕರ ಶೆಟ್ಟಿ, ಜಯಂತಿ, ಎ.ಲಕ್ಮೀ ವಿ.ಪ್ರಭು,ಪದ್ಮನಾಭ ಗೌಡ,ಗಣೇಶ್, ಹರೀಶ್, ಬಿ.ಸದಾಶಿವ ಶೆಣೈ ಉಪಸ್ಥಿತರಿದ್ದರು.
ಸಿಬ್ಬಂದಿ ಸ್ವಾತಿ ಸ್ವಾಗತಿಸಿ, ಬ್ಯಾಂಕ್ ನ ಉಪಾಧ್ಯಕ್ಷ ಆದಿರಾಜ್ ಜೈನ್ ಧನ್ಯವಾದ ನೀಡಿದರು.














