Coastal Bulletin

ಬಂಟ್ವಾಳ :ಬಾರೀ ತಿರುವು ಮತ್ತು ಕಿರಿದಾದ ರಸ್ತೆಯಲ್ಲೇ ಮಳೆ ನೀರು ಹರಿದು ಹಲವು ಬಾರಿ ವಾಹನ ಅಪಘಾತಕ್ಕೆ ಕಾರಣವಾದ ಬಾರ್ಜರ್ ರಸ್ತೆಯ ವಿಸ್ತರಣೆ ಹಾಗೂ ಮೋರಿ ಅಳವಡಿಕೆ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆತಿದೆ.

ಬಂಟ್ವಾಳ-ಮೂಡುಬಿದ್ರೆ ಮುಖ್ಯ ರಸ್ತೆ ನಡುವಿನ ಬಾಜಾ೯ರ್ ತಿರುವು ಬಳಿ ರಸ್ತೆ ಮತ್ತು ಚರಂಡಿ ನೀರು ಇಲ್ಲಿನ ಹಲವು ಗದ್ದೆಗೆ ಹರಿಯುತ್ತಿತ್ತು. ಇದರಿಂದಾಗಿ ಕಳೆದ ನಾಲ್ಕೈದು ವಷ೯ಗಳಿಂದ  ಹಡಿಲುಬಿದ್ದ ಗದ್ದೆಯಲ್ಲಿ ಭತ್ತದ ಕೖಷಿ ಮಾಡಲು ಸ್ಥಳೀಯ ರೈತರು ಈ ವಷ೯ ಮುಂದೆ ಬಂದಿದ್ದಾರೆ.  ಭಾರೀ ತಿರುವು ಮತ್ತು ಕಿರಿದಾದ ರಸ್ತೆಯಲ್ಲೇ ಮಳೆ ನೀರು ಹರಿದು ಹಲವು

ಬಾರಿ ವಾಹನ ಅಪಘಾತಕ್ಕೂ ಕಾರಣವಾಗಿತ್ತು. ಇದರಿಂದಾಗಿ ಇಲ್ಲಿನ ನಾಗರಿಕರ ಹಲವು ವಷ೯ಗಳ ಬೇಡಿಕೆಯಾಗಿದ್ದ ಮೋರಿ ಅಳವಡಿಕೆ ಮತ್ತು ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆತಿದೆ. ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸದಸ್ಯ ಸಂತೋಷ್ ಕುಮಾರ್ ಬೆಟ್ಟು, ಪಿಡಿಒ ಮಧು,  ಎಂಜಿನಿಯರ್ ಅರುಣ್ ಪ್ರಕಾಶ್, ಗುತ್ತಿಗೆಗಾರ ವಳಚ್ಚಿಲ್ ಖಾದರ್ ಮತ್ತಿತರರು ಇದ್ದರು.   

Leave a Comment