Coastal Bulletin

ಬನ್ನೇರುಘಟ್ಟ :ಸಹಾಯ ಮಾಡುವ ನೆಪದಲ್ಲಿ ಮನೆಗೆ ಕರೆಸಿ ತಲೆಗೆ ಗನ್ ಇಟ್ಟು ಬೆದರಿಸಿ ಅತ್ಯಾಚಾರ ಎಸಗಿರುವುದಾಗಿ ಬನ್ನೇರುಘಟ್ಟ ಗ್ರಾಪಂ ಸದಸ್ಯ ಬಿಲವಾರಹಳ್ಳಿಯ ಅಹಮದ್ ಪಾಷಾ ವಿರುದ್ದ ಮಹಿಳೆ ದೂರು ದಾಖಲಿಸಿದ್ದಾಳೆ . ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಹಮದ್ ಪಾಷಾ ಮತ್ತು ಕಾರು ಚಾಲಕ ವಾಹಿಬ್‌ನನ್ನು ಬಂಧಿಸಿದ್ದಾರೆ.

ಹದಿನೈದು ದಿನಗಳ ಹಿಂದೆ ಅಹಮದ್‌ಗೆ ಫೇಸ್‌ಬುಕ್ ಮೂಲಕ ಮಹಿಳೆ ಪರಿಚಯವಾಗಿತ್ತು . ಹೆಬ್ಬಾಳದಲ್ಲಿ ವಾಸಿಸುತ್ತಿದ್ದ ಆಕೆಯ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದ ಆತ ಬನ್ನೇರುಘಟ್ಟ ವಾರ್ಡ್ನ ಕಾರ್ಪೋರೇಟರ್ ಎಂದು ಪರಿಚಯಿಸಿಕೊಂಡಿದ್ದ . ಲಾಕ್‌ಡೌನ್ ಅವಧಿಯಲ್ಲಿ ದಿನಸಿ ಕಿಟ್ ವಿತರಿಸುತ್ತಿರುವ ಫೋಟೋಗಳನ್ನು ಕಳುಹಿಸಿದ್ದ . ಅದನ್ನು ನಂಬಿದ ಮಹಿಳೆ , ತನಗೆ ಮಾಡೆಲಿಂಗ್ ಕೆಲಸ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಳು .

ಅದಕ್ಕೆ ಒಪ್ಪಿದ್ದ ಆತ  ತನ್ನ ಮನೆಗೆ ಕರೆಸಿಕೊಂಡು ಆಕೆಯ ಜೊತೆ ಬಂದಿದ್ದ ಮಕ್ಕಳನ್ನು ಹಾಲ್‌ನಲ್ಲಿ ಆಟವಾಡಲು ಹೇಳಿ ಮಹಿಳೆಯನ್ನು ಬೆಡ್ ರೂಂಗೆ ಕರೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ . ಅದಕ್ಕೆ ಆಕೆ ವಿರೋಧಿಸಿದಾಗ ತಲೆಗೆ ಗನ್ ಇಟ್ಟು ಬೆದರಿಸಿದ್ದ . ಜತೆಗೆ ಆಕೆಯ ನಗ್ನ ಫೋಟೋಗಳನ್ನು ಸೆರೆಹಿಡಿದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ .

Leave a Comment