Coastal Bulletin

ನಾವು ನಮ್ಮ ಮಗು ಹುಟ್ಟಿದಾಗಿನಿಂದಲೂ ಅನೇಕ ಫೋಟೋಶೂಟ್ ಗಳನ್ನು ಮಾಡಿದ್ದೆವು. ನಮಗೆ ಭಾರತೀಯ ಹಬ್ಬಗಳನ್ನು ಬಿಂಬಿಸುವಂತಹ ಅರ್ಥಪೂರ್ಣವಾದ ಫೋಟೋಗಳನ್ನು ಮಾಡಬೇಕೆಂಬ ಆಸೆ ಇತ್ತು.

ಅದರಂತೆಯೇ ಮನೆಯವರ ಎಲ್ಲರ ಸಹಾಯದಿಂದ ಸಂಕ್ರಾಂತಿ, ಶಿವರಾತ್ರಿ , ಯುಗಾದಿ, ರಾಮನವಮಿ,  ಗಣರಾಜ್ಯೋತ್ಸವ , ಸ್ವತಂತ್ರ ದಿನಾಚರಣೆ , ಪರಿಸರ ದಿನಾಚರಣೆ , ಶ್ರಾವಣ ಮಾಸ, ವರಮಹಾಲಕ್ಷ್ಮಿ,  ನವರಾತ್ರಿ,  ಕೃಷ್ಣ ,ಜನ್ಮಾಷ್ಟಮಿ, ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ, ಅಡ್ವಕೇಟ್ , ಹೋಳಿ ಹಬ್ಬ ಹಾಗೂ ಇನ್ನೂ ಮುಂತಾದವುಗಳನ್ನು ಮಾಡಿದ್ದೆವು. 

2022 ನೇ ಸಾಲಿನಲ್ಲಿ ಐಪಿಎಲ್ ಶುರುವಾದಾಗ ನಮ್ಮ ಮನೆಯವರೆಲ್ಲರೂ ಆರ್‌ಸಿಬಿ ಟೀಮ್ಗೆ ಸಪೋರ್ಟ್ ಮಾಡುವುದರಿಂದ ಆರ್ ಸಿ ಬಿ ಫೋಟೋಶೂಟ್ ಮಾಡಿದೆವು ಆಗ ಮಗುವಿಗೆ 5 ತಿಂಗಳಾಗಿತ್ತು. ಈ ಫೋಟೋಗಳು ಎಲ್ಲರ ಮೆಚ್ಚುಗೆ ಪಡೆಯಿತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯವಾಗಿತ್ತು. ಈ ಫೋಟೋದ ಮೂಲಕ ನಾವೆಲ್ಲರೂ ಆರ್‌ಸಿಬಿ

ಟೀಮ್ ಅನ್ನು ಬೆಂಬಲಿಸುತ್ತೇವೆ ಹಾಗೂ ಸುಧನ್ವನು ಸಹ ಆರ್‌ಸಿಬಿ ಮ್ಯಾಚನ್ನು ಬಹಳ ಕುತೂಹಲದಿಂದ ನೋಡುತ್ತಾನೆ ನಮಗೆ ಆಶ್ಚರ್ಯ ಮತ್ತು ಸಂತೋಷವಾಗುತ್ತೆ. ಆರ್‌ಸಿಬಿ ಎಂದೊಡನೆ ಚಪ್ಪಾಳೆ ತಟ್ಟಿ ಕುಣಿಯುತ್ತಾನೆ ಮತ್ತು‌ "ಈ ಸಲ ಕಪ್" ಎಂದರೆ ನಮ್ಮದು ಎಂಬಂತೆ ಎದೆ ತಟ್ಟಿಕೊಳ್ಳುತ್ತಾನೆ. ಇದರಿಂದ ಹೇಳಬಹುದು ಈತನ ರ್‌ಸಿಬಿಟಿನ ಅತ್ಯಂತ ಕಿರಿಯ ಅಭಿಮಾನಿ. ಈ ಸಲ ಆರ್‌ಸಿಬಿ ಕಪ್ ಗೆಲ್ಲಬೇಕೆಂಬುದು ಸುಧನ್ವ ಹಾಗೂ ನಮ್ಮೆಲ್ಲರ ಆಶಯ. ಸೋಲು ಗೆಲುವು ಏನೇ ಆದರೂ ನಾವು ಆರ್‌ಸಿಬಿ ಸಪೋರ್ಟ್ ಮಾಡುತ್ತಲೇ ಇರುತ್ತೇವೆ.

ಮಗುವಿನ ಹೆಸರು: ಸುಧನ್ವ

ಮಗುವಿನ ವಯಸ್ಸು: ಒಂದು ವರ್ಷ ನಾಲಕ್ಕು ತಿಂಗಳು

ತಂದೆಯ ಹೆಸರು: ಸುಪ್ರೀತ್ ಬಾಬು ಕೆಎನ್

ತಾಯಿಯ ಹೆಸರು: ಸುಪ್ರಿಯ ಎಂಎಸ್

ಊರು: ಮೈಸೂರು


Leave a Comment