Coastal Bulletin

ಮಂಗಳೂರು : ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಎಮ್ ಡಿ ಎಮ್ ಎ ಎಂಬ ಮಾದಕ ವಸ್ತುಗಳೊಂದಿಗೆ ಇಬ್ಬರನ್ನು ಬಂಧಿಸಿದ ಪ್ರಕರಣ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಡುಬಂದಿದೆ.

 ಬೆಂಗಳೂರಿನಿಂದ ಉಪ್ಪಿನಂಗಡಿ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ ನಿಷೇಧಿತ ಮಾದಕ ವಸ್ತು ಎಂ.ಡಿ.ಎಮ್.ಎ ನ್ನು ಅಕ್ರಮವಾಗಿ ಮೆಲ್ಕಾರ್ ಮುಡಿಪು ನಾಟೆಕಲ್ ರಸ್ತೆಯಿಂದ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ

PSI ಮಲ್ಲಿಕಾರ್ಜುನ ಬಿರದಾರ ಮತ್ತು ಸಿಬ್ಬಂದಿಯವರ ಜೊತೆಯಲ್ಲಿ 3.9 ಲಕ್ಷ  ಮೊತ್ತದ ಮಾದಕ ವಸ್ತು,5 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಹಾಗೂ ಇನ್ನಿತರ ಬೆಲೆ ಬಾಳು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Comment