ಮಂಗಳೂರು : ಏರ್ ಇಂಡಿಯಾ ಕಂಪನಿಯಲ್ಲಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದ ಪುಷ್ಪಲತಾ ನಾಯಕ್ (64 ವರ್ಷ) ಎಂಬ ಮಹಿಳೆ ತಾನು ವಾಸವಿದ್ದ ಪ್ಲಾಟ್ ನ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕುಲಶೇಖರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕುಲಶೇಖರದ ಪ್ಲಾಮಾ ಗ್ರೌಂಡ್ ಅಪಾರ್ಟೆಂಟ್ ನಲ್ಲಿ ಗಂಡ ವಾಸುದೇವ ನಾಯಕ್ ತರಕಾರಿ ಮಾರುಕಟ್ಟೆಗೆ ತೆರಳಿದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ.
ಪುಷ್ಪಲತಾ ನಾಯಕ್ ಹತ್ತು ವರ್ಷಗಳ ಹಿಂದೆ ರಿಟೈರ್ ಆಗಿದ್ದು ಮಂಗಳೂರಿನಲ್ಲಿ ನೆಲೆಸಿದ್ದರು. ತೀವ್ರ ಖಿನ್ನತೆಗೆ
ಒಳಗಾಗಿದ್ದ ಮಹಿಳೆ ಹಿಂದೊಮ್ಮೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು ಎನ್ನಲಾಗಿದೆ.
ಪ್ಲಾಟ್ ನಲ್ಲಿ ಗಂಡ ಹೆಂಡತಿ ಇಬ್ಬರೇ ವಾಸ ಇದ್ದು ಮಗ ಸಿಂಗಾಪುರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಇನ್ನೊಬ್ಬ ಮಗಳು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಘಟನೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಅಂದಾಜಿಸಲಾಗಿದೆ.















