Coastal Bulletin

ಬೆಂಗಳೂರು : ರಾಜ್ಯಾದ್ಯಂತ ಪ್ರತಿ ಯೂನಿಟ್ ವಿದ್ಯುತ್ ಗೆ ಸರಾಸರಿ 30 ಪೈಸೆ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ನೀಡಿದೆ.

ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ ಗೆ 30ಪೈಸೆ ಏರಿಕೆ ಮಾಡಿದೆ. ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂ) ಪ್ರತಿ ಯೂನಿಟ್‌ಗೆ 83 ಪೈಸೆಯಿಂದ 1.68 ರೂ.ವರೆಗೆ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. . ಆದರೆ, ಅರ್ಜಿಗಳ ವಿಚಾರಣೆ ನಡೆಸಿದ ಆಯೋಗವು ಪ್ರತಿ ಯೂನಿಟ್ ಗೆ 30ಪೈಸೆ (ಶೇ.3.84)ಏರಿಕೆ ಮಾಡಿದೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪ ಚುನಾವಣೆ ನೀತಿ

ಸಂಹಿತ ಹಾಗೂ ಕೊರೋನಾ ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು. 2021-22 ನೇ ಸಾಲಿಗೆ ದರ ಪರಿಷ್ಕರಣೆ ಮಾಡದೇ ಇದ್ದರೆ, ಎಸ್ಕಾಂಗಳಿಗೆ 1,819.38 ಕೋಟಿ ರೂ. ಆದಾಯ ನಷ್ಟ ಆಗಲಿದ್ದು, ಇದನ್ನು ಭರಿಸಲು ದರ ಹೆಚ್ಚಳ ಅನಿವಾರ್ಯ ಎಂದು ಆಯೋಗ ತಿಳಿಸಿದೆ. 

 2021ರ ಏ.1ರಿಂದ ದರ ಪರಿಷ್ಕರಣೆ ಜಾರಿಗೆ ಬರುತ್ತದೆಯಾದರೂ ಮೊದಲ ಮೀಟರ್ ಓದುವ ದಿನಾಂಕದಿಂದ ಅನ್ವಯವಾಗುತ್ತದೆ.

Leave a Comment