14ನೇ ಬಜೆಟ್ ಮಂಡನೆಯ ಕುರಿತು ಸಿದ್ದರಾಮಯ್ಯನವರಿಗೆ ಪತ್ರ ಬರೆದ ಡಾ.ವೀರೇಂದ್ರ ಹೆಗ್ಗಡೆ

Coastal Bulletin
14ನೇ ಬಜೆಟ್ ಮಂಡನೆಯ ಕುರಿತು ಸಿದ್ದರಾಮಯ್ಯನವರಿಗೆ ಪತ್ರ ಬರೆದ ಡಾ.ವೀರೇಂದ್ರ ಹೆಗ್ಗಡೆ

ಸಿದ್ದರಾಮಯ್ಯನವರ 14 ನೇ ಬಜೆಟ್ ಮಂಡನೆಯ ಕುರಿತು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಅಭಿನಂದನ ಪತ್ರವನ್ನು ಬರೆದಿದ್ದಾರೆ. ಮಾತ್ರವಲ್ಲದೇ ವೀರೇಂದ್ರ ರವರ ಪತ್ರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 14 ನೇ ಬಜೆಟ್ ಮಂಡಿಸಿರುವ ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು. ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನು ನೀಡಿದ್ದೀರಿ. ಇದೇ ರೀತಿಯಲ್ಲಿ ನಿಮ್ಮ ಆಡಳಿತ ಮುಂದುವರಿಯಲಿ ಹಾಗೂ ಅವಕಾಶವಿದ್ದಲ್ಲಿ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನವನು ಪಡೆದುಕೊಳ್ಳಿ ಎಂದು ಹೆಗ್ಗಡೆಯವರು ತಮ್ಮ ಪತ್ರದ ಮೂಲಕ

ಶುಭಕೋರಿದ್ದಾರೆ. 

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಾನು ಮಂಡಿಸಿದ 14 ನೇ ಬಜೆಟ್‌ನ ಫಲಶೃತಿಯನ್ನು ಶ್ಲಾಘಿಸಿ ಹಾಗೂ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚಗೆ ಸೂಚಿಸಿ ಬರೆದಿರುವ ಪತ್ರಕ್ಕೆ ಧನ್ಯವಾದಗಳು ಎಂದು ವೀರೇಂದ್ರ ಹೆಗ್ಗಡೆಯವರು ಬರೆದ ಪತ್ರಕ್ಕೆ ಸಿದ್ದರಾಮಯ್ಯನವರು ಸಂತಸ ವ್ಯಕ್ತಪಡಿಸಿದ್ದಾರೆ.


Leave a Comment