ಬೆಂಗಳೂರು :ಬಂಡಾಯ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯರವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಸೋಂಕು ತಗುಲಿದ ಹಿನ್ನಲೆಯಲ್ಲಿ ಕೊನೆಯುಸಿರೆಳೆದರು.
ಬಂಡಾಯ ಸಾಹಿತಿಯೆಂದೇ ಗುರುತಿಸಿದ್ದ ಡಾ.ಸಿದ್ದಲಿಂಗಯ್ಯರವರು ಇಂದು ಸಂಜೆ 4.45ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಿದ್ದಲಿಂಗಯ್ಯರವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ತಮ್ಮ ಬಂಡಾಯ ಸಾಹಿತ್ಯಗಳಿಂದಲೇ ಗುರುತಿಸಿಕೊಂಡಿದ್ದ ಇವರು 'ಯಾರಿಗೆ ಬಂತು
ಎಲ್ಲಿಗೆ ಬಂತು ಸ್ವಾತಂತ್ರ್ಯ, ಇಕ್ರಲ್ಲಾ ಒದಿರ್ಲಾ,ಹೊಲೆಮಾದಿಗರ ಹಾಡು ಮುಂತಾದ ಕವನಗಳನ್ನು ರಚಿಸಿದ್ದರು. ಗ್ರಾಮದೇವತೆ ಎಂಬ ಸಂಶೋಧನಾ ಗ್ರಂಥ, ಏಕಲವ್ಯ ಎಂಬ ನಾಟಕ ಹಾಗೂ ಊರುಕೇರಿ ಎಂಬ ಆತ್ಮಕಥೆ ಬರೆದಿದ್ದ ಇವರು ಅಂಬೇಡ್ಕರ್ , ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.















