ಪಾಸ್ ಪೋರ್ಟ್ ಇಲ್ಲದೆ ಅಧಿಕೃತ ವಾಸ: ಶ್ರೀಲಂಕಾ ಪ್ರಜೆಗಳ ಬಂಧನ

Coastal Bulletin
ಪಾಸ್ ಪೋರ್ಟ್ ಇಲ್ಲದೆ ಅಧಿಕೃತ ವಾಸ: ಶ್ರೀಲಂಕಾ ಪ್ರಜೆಗಳ ಬಂಧನ

ಮಂಗಳೂರು :ಅಧಿಕೃತವಾಗಿ ಪಾಸ್ ಪೋರ್ಟ್ ಇಲ್ಲದೆ ವಾಸವಾಗಿದ್ದ 38 ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಪಾಸ್ ಪೋರ್ಟ್ ಇಲ್ಲದೆ ಅನಧಿಕೃತವಾಗಿ  ಮಂಗಳೂರಿನಲ್ಲಿ ವಾಸವಾಗಿದ್ದ ಶ್ರೀಲಂಕಾದ ಒಟ್ಟು 38 ಮಂದಿ ಪ್ರಜೆಗಳನ್ನು ಹಾಗೂ ಅವರಿಗೆ  ಆಶ್ರಯ ನೀಡಿದ 6 ಜನ ಸ್ಥಳೀಯರನ್ನು ಮಂಗಳೂರು ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಉದ್ಯೋಗ ಅರಸಿಕೊಂಡು ಕೆನಡಾ ತೆರಳುವ ಯತ್ನದಲ್ಲಿದ್ದ ಶ್ರೀಲಂಕಾದ ಪ್ರಜೆಗಳು ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ವಿವಿಧ ಲಾಡ್ಜ್‌ಗಳಲ್ಲಿ ಆಶ್ರಯ ಪಡೆದಿದ್ದರು. ಈ ಬಗ್ಗೆ ಪೊಲೀಸರಿಗೆ ತಮಿಳುನಾಡು ಗುಪ್ತಚರ ಇಲಾಖೆಯಿಂದ   ಮಾಹಿತಿ ಬಂದ ಮೇರೆಗೆ ಎಲ್ಲರನ್ನು ಕೂಡ  ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅವರಿಗೆ ಆಶ್ರಯ ನೀಡಿದ ಸ್ಥಳೀಯರನ್ನು ಬಂಧಿಸಿ  ವಿಚಾರಣೆಗೊಳಪಡಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮೀಷನರ್ ಶಿಶಿಕುಮಾರ್ ರವರು ಮಾನವ ಕಳ್ಳಸಾಗಣೆ ಪ್ರಕರಣ ಇದಾಗಿದ್ದು, ವಿದೇಶಿ ಪ್ರಜೆಗಳ ಅಕ್ರಮ ಪ್ರವೇಶ ಗಂಭೀರ ಅಪರಾಧ ಆಗಿದೆ. ವಶಕ್ಕೆ ಒಳಗಾದ ಮಂದಿ ಉತ್ತರ ಶ್ರೀಲಂಕಾ ಭಾಗದ ನಿವಾಸಿಗಳೆಂದು ಗುರುತಿಸಲಾಗಿದೆ. ಇವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವಿದೇಶಿ ಕಾಯ್ದೆ ಐಪಿಸಿ ಸೆಕ್ಷನ್ 14ರ ವಿದೇಶಿಯರ ಕಾಯ್ದೆ 1964 ಸೆಕ್ಷನ್ 12 (1) (A) ಪಾಸ್‌ಪೋರ್ಟ್ ಕಾಯ್ದೆ ೧೯೬೭ರಂತೆಯೂ ಪ್ರಕರಣ ದಾಖಲಾಗಿದೆ ಎಂದರು.

Leave a Comment