ಪಟಪಟ ಮಾತಾನಾಡುತ್ತ ಜನರ ಮನಸ್ಸನ್ನು ಗೆದ್ದಿರುವ ಚೆಲುವೆ ಅನುಶ್ರೀ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ತಮ್ಮ ಮಾತುಗಳಿಂದ ಜನಪ್ರಿಯವಾಗಿರುವ ಬ್ಯೂಟಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ನಿರೂಪಕಿಯಾಗಿದ್ದಾರೆ. ತಮ್ಮ ವಿಶೇಷ ನಿರೂಪಣೆಯ ಮೂಲಕವೇ ಅಭಿಮಾನಿಗಳನ್ನು ಹೆಚ್ಚು ಹೆಚ್ಚು ತಲುಪುತಿದ್ದಾರೆ. ಸ್ಟಾರ್ ನಟರ ಸಿನಿಮಾಗಳ ಪ್ರಮೋಷನ್ ಕಾರ್ಯಕ್ರಮಕ್ಕೂ ಇವರ ನಿರೂಪಣೆಯೇ ಬೇಕು ಎನ್ನುವಷ್ಟರ ಮಟ್ಟಿಗೆ ಡಿಮಾಂಡ್ ಪಡೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲೂ ಫುಲ್ ಆಕ್ಟೀವ್ ಆಗಿರುವ ಈಕೆ, ಇನ್ಟ್ಸ್ ಗ್ರಾಮ್‌ನಲ್ಲಿ ತಮ್ಮ ಶಾಲಾದಿನದ ಸವಿ ನೆನಪಯಗಳ ಬಗ್ಗೆ ನಟಿ ಅನುಶ್ರೀ ಮೆಲುಕು ಹಾಕುತ್ತ, ತಮ್ಮ ಸ್ಕೂಲ್ ಐಡೆಂಟಿಟಿ ಕಾರ್ಡಿನ ಫೋಟೋ ಹಂಚಿಕೊಂಡಿದ್ದಾರೆ. ಈ ಹುಡುಗಿ ಯಾರೆಂದು ಗೊತ್ತಾ? ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತ ಹೇಳಿದ್ದಾರೆ.
class="MsoNormal">ಸ್ಕೂಲ್ ಫೋಟೋದಲ್ಲಿ ಅನುಶ್ರೀ ಈಗಿನಂತೆ ಮುದ್ದುಮುದ್ದಾಗಿ ಕಾಣುತ್ತಿದ್ದಾರೆ. ಹಣೆಗೆ ಕುಂಕುಮ ಇಟ್ಟಿದ್ದಾರೆ. ಈ ಚಿತ್ರ ಫೋಸ್ಟ್ ಮಾಡಿದ್ದ ಕೆಲವೇ ನಿಮಿಷದಲ್ಲಿ ೧೮ ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಇನ್ನು ಅನುಶ್ರೀ ಹಂಚಿಕೊಂಡಿರುವ ಫೋಟೋಗೆ ಕಾಂಮೆಂಟ್‌ಗಳ ಜತೆಗೆ ಇದಕ್ಕೆ ಸಾಕಷ್ಟು ತಮಾಷೆಯ ಕಾಮೆಂಟ್‌ಗಳ ಸುರಿಮಳೆ ಬಂದಿದೆ.
















