ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಿರ್ಮಾಪಕ ರಂಗ SSLC, ಅಟೋಗ್ರಾಫ್, ಸ್ವಾತಿ ಮುತ್ತು ಹೀಗೆ ಹಲವು ಸಿನಿಮಾಗಳಿಗೆ ವಿತರಕ ಎಂ ಎನ್ ಕುಮಾರ್ ಇದೀಗ ಅಭಿನಯ ಚಕ್ರವರ್ತಿಯಾಗಿರುವ ಕಿಚ್ಚ ಸುದೀಪ್ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಾತ್ರವಲ್ಲ ಸುದೀಪ್ ವಿರುದ್ಧ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್ ಅವರು ಕೈಗೆ ಸಿಗುತ್ತಿಲ್ಲ. ಈಗಾಗಲೇ ಸುದೀಪ್ ಅವರಿಗೆ ಅಡ್ವಾನ್ಸ್
ಕೂಡ ಕೊಟ್ಟಿದ್ದೇನೆ. ಆದರೆ ಈಗ ಸಿನಿಮಾ ಮಾಡಲು ಒಪ್ಪುತ್ತಿಲ್ಲ. ಎಂದು ನಿರ್ಮಾಪಕರು ದೂರಿದ್ದಾರೆ.
ಕಿಚ್ಚ ಸುದೀಪ್ ಜೊತೆ ಮಾಡಿಕೊಂಡಿರುವ ಅಗ್ರಿಮೆಂಟ್‌ನಂತೆ ಚಿತ್ರ ಮಾಡಿ ಕೊಟ್ಟಿರುವ ಮಾತು ಈಡೇರಿಸದಿದ್ದರೆ ಸುದೀಪ್ ಅವರ ನಿವಾಸ ಅಥವಾ ಶೂಟಿಂಗ್ ಸ್ಥಳದಲ್ಲಿ ಧರಣಿ ನಡೆಸುವುದಾಗಿ ಕುಮಾರ್ ಎಚ್ಚರಿಕೆಯನ್ನು ನೀಡಿದ್ದಾರೆ.















