Coastal Bulletin

ರೀಲ್ಸ್ ಮಾಡಲು ಹೋಗಿ ಜಲಾಪಾತದಿಂದ ಕೆಳಗೆ ಬಿದ್ದು ಮಂಗಳೂರು ಮೂಲದ ವಿದ್ಯಾರ್ಥಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಮಂಗಳೂರು ಮೂಲದ ಸದ್ಯ ಚೆನ್ನೈ ನಲ್ಲಿ ರಾಜೀವ್ ಗಾಂಧಿ ಕಾಲೇಜಿನಲ್ಲಿ ಓದುತ್ತಿದ್ದ ಸುಮಂತ್ (22) ಎಂದು ಗುರುತಿಸಲಾಗಿದೆ.

ಈತ ತನ್ನ ಸ್ನೇಹಿತರೊಂದಿಗೆ ತಿರುಪತಿ ಬಳಿಯ ತಲಕೋನಾ ಜಲಪಾತಕ್ಕೆ ತೆರಳಿದ್ದ. ಸುಮಂತ್ ಈ ವೇಳೆ ನೀರಿಗೆ ಜಿಗಿಯಲು ಹೋಗಿದ್ದರು. ಈ ಸಮಯದಲ್ಲಿ ರೀಲ್ಸ್ ಗಾಗಿ ಬಂಡೆಯ ಮೇಲೆ ಹೋಗಿ 10-ರಿಂದ 15 ಅಡಿ ಎತ್ತರದಿಂದ ನೀರಿಗೆ ಹಾರಿದ್ದಾರೆ.  ತದನಂತರ ಎಷ್ಟು ಕಾದರೂ ನೀರಿನಿಂದ ಮೇಳಕ್ಕೆ ಬರದೇ ಹೋದ ಕಾರಣ ಸ್ನೇಹಿತರು

ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. 

ಇದಾದ ಬಳಿಕ ರಕ್ಷಣಾ ತಂಡ ಕೂಡಲೇ ಆಗಮಿಸಿ ದೀರ್ಘ ಕಾಲದ ವರೆಗೆ ಹುಡುಕಾಟವನ್ನು ನಡೆಸಿದ್ದಾರೆ. ಶನಿವಾರ ಬೆಳಗ್ಗೆ ಸುಮಂತ್ ಮೃತದೇಹ ನೀರಿನ ಅಡಿಯಲ್ಲಿ ಪತ್ತೆಯಾಗಿದೆ. ಆತನ ತಲೆ ಎರಡು ಕಲ್ಲುಗಳ ನಡುವೆ ಸಿಕ್ಕಿಕೊಂಡಿತ್ತು. ಕಲ್ಲಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 


Leave a Comment