ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಚುರುಕು ಪಡೆದಿದ್ದು, ಸೋಮವಾರ ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗಿದೆ. ಮಾತ್ರವಲ್ಲ ಮಂಗಳೂರಿನಲ್ಲಿ ಈ ಮಳೆಗಾಲದ ಮೊದಲ ಕೃತಕ ನೆರೆ ಸೃಷ್ಟಿಯಾಗಿದೆ. ಭಾರೀಮಳೆ ಆರಂಭವಾದ ಕೆಲವೇ ಹೊತ್ತಿನಲ್ಲಿ ನಗರದ ಬಹುತೇಕ ರಸ್ತೆಗಳಲ್ಲಿ ಚರಂಡಿ, ಮ್ಯಾನ್‌ಹೋಲ್‌ನಿಂದ ಮಲಿನ ನೀರು ಉಕ್ಕೇರಿ ಪ್ರವಾಹ ಉಂಟಾಗಿದೆ.
ಮಂಗಳೂರಿನ ಪಿ.ವಿ.ಎಸ್ ವೃತ್ತದಿಂದ ಬಿಜೆಪಿ ಆಫೀಸ್ ಮುಂಭಾಗದಿಂದ ಹಂಪನಕಟ್ಟೆ ಬರುವ ಕೈಬರ್ ಪಾಸ್ ಲೇನ್‌ನ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು ಅಪಾಯವನ್ನು ಸೃಷ್ಟಿಸಿದೆ. ಗುಡ್ಡ ಕುಸಿದ ಮೇಲ್ಬಾಗದಲ್ಲಿ ಕೋರ್ಟ್ ಆವರಣ ಮತ್ತು ರಸ್ತೆ ಇದ್ದು ನೂರಾರು
ವಾಹನಗಳು ನಿತ್ಯ ಈ ಮಾರ್ಗದಲ್ಲಿ ಸಂಚಾರಿಸುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 5 ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮಾತ್ರವಲ್ಲ ಜುಲೈ 4 ಹಾಗೂ 5 ರಂದು ಆರೆಂಜ್ ಅಲರ್ಟ್ ಘೋಷಿಸಿದೆ.















