ಕಾಸರಗೋಡು: ಸುರಿಯುತ್ತಿರುವ ಭಾರೀ ಮಳೆಗೆ ಬಾಲಕಿಯೊಬ್ಬಳ ಮೇಲೆ ಮರವೊಂದು ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತರನ್ನು ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆಯಶತ್ ಮಿನ್ಹಾ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕಿ ಅಟವಾಡುತ್ತಿದ್ದ ಸಂದರ್ಭದಲ್ಲಿ ಮರವು ಮುರಿದು ಬಿದ್ದಿದ್ದೆ. ಕೂಡಲೇ ಅಲ್ಲಿದ್ದವರು ಬಾಲಕಿಯನ್ನು ಮರದಡಿಯಿಂದ ಹೊರ
ತೆಗೆದು ಕುಂಬಳೆಯ ಆಸ್ಪತ್ರೆಗೆ ಸಾಗಿಸಿದರೂ ಈ ವೇಳೆ ಬಾಲಕಿ ಮೃತಪಟ್ಟಿದ್ದಳು ಎನ್ನಲಾಗಿದೆ.
ಆಕೆ ಜೊತೆ ಉಳಿದ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿದ ಪಾರಾಗಿದ್ದಾರೆ ಎಂದು ಶಿಕ್ಷಕರು ಒಬ್ಬರು ತಿಳಿಸಿದ್ದಾರೆ.















