ಕಳ್ಳಿಗೆ ಗ್ರಾಮದ 30 ವಿಕಲಚೇತನರಿಗೆ ನಿಸರ್ಗ ಇಲೆಕ್ಟ್ರಾನಿಕ್ಸ್ ದೇಮುಂಡೆ ಇದರ ಮಾಲಕರಾದ ಕಿಶೋರ್ ಕುಮಾರ್ ದೇಮುಂಡೆ ಮತ್ತು ಕಳ್ಳಿಗೆ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ದಿನಸಿ ಕಿಟ್ ವಿತರಣೆ
ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಕಳ್ಳಿಗೆ ಗ್ರಾಮದ 30 ವಿಕಲಚೇತನರಿಗೆ ನಿಸರ್ಗ ಇಲೆಕ್ಟ್ರಾನಿಕ್ಸ್ ದೇಮುಂಡೆ ಇದರ ಮಾಲಕರಾದ ಕಿಶೋರ್ ಕುಮಾರ್ ದೇಮುಂಡೆ ಇವರ ಸಹಕಾರದೊಂದಿಗೆ ಕಳ್ಳಿಗೆ ಗ್ರಾಮ ಪಂಚಾಯತ್ ವತಿಯಿಂದ ಕಳ್ಳಿಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ
ದಿನಬಳಕೆಯ ದಿನಸಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಸದಸ್ಯರಾದ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಮನೋಜ್ ವಳವೂರು, ರವಿರಾಜ್ ಜೈನ್, ಟಾಸ್ಕ್ ಫೋರ್ಸ್ ಸದಸ್ಯರಾದ ಸುರೇಶ್ ಭಂಡಾರಿ ಅರ್ಬಿ, ಸುಧಾಕರ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು.














