Coastal Bulletin

ಉಡುಪಿಯ ಪಾರಂಪರಿಕ ಕಟ್ಟಡವೊಂದು ಸದ್ಯದಲ್ಲೇ ನೆಲಸಮವಾಗಲಿದೆ. ಮಾತ್ರವಲ್ಲ ಅಭಿವೃದ್ದಿಯ ಹೆಸರಿನಲ್ಲಿ ಸುಮಾರು 12 ದಶಕಗಳಷ್ಟು ಹಳೆಯ ಐತಿಹಾಸಿಕ ಕಟ್ಟಡ ನೆಲೆಸಮವಾಗಲಿದೆ. ಚಾರಿತ್ರಿಕ ಮಹತ್ವ ಹೊಂದಿರುವ ಉಡುಪಿಯ ಹಳೆ ತಾಲೂಕು ಕಚೇರಿ ಕಟ್ಟಡವನ್ನು ಸುಮಾರು 12 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಇದೇ ಜೈಲು ಕಟ್ಟಡದಲ್ಲೇ ಜಗತ್ತಿನಾದ್ಯಂತ ಸದ್ದು ಮಾಡಿದ ಕಾಂತಾರ ಸಿನಿಮಾ ಚಿತ್ರಿಕರಣಗೊಂಡಿತ್ತು.

ಆದರೆ ಇಂದು ನಗರಸಭೆ, ಹೊಸ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಮುಂದಾಗಿದ್ದು ಅದಕ್ಕಾಗಿ ಪಾರಂಪರಿಕ ಜೈಲನ್ನು ಕೆಡವಲು ಮುಂದಾಗಿದೆ. ಸದ್ಯ ಕಟ್ಟಡದ ರಚನೆಯ ದಾಖಲೀಕರಣ ಕಾರ್ಯವನ್ನು ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಅರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್

ಮಂಗಳೂರು ಶಾಖೆ ಮಾಡುತ್ತಿದೆ. 

ಉಡುಪಿ ಹಾಗೂ ಮಂಗಳೂರಿನ 12 ಕಲಾವಿದರು ಕಟ್ಟಡ ದ ಕಲಾಕೃತಿಗಳನ್ನು ರಚಿಸಿ ಜಾಗೃತಿ ಮೂಡಿಸುತ್ತಿದ್ದು ಪರ್ಯಾಯವಾಗಿ ಮ್ಯೂಸಿಯಂ, ಪಾರಂಪರಿಕ ವಸ್ತುಸಂಗ್ರಹಾಲಯ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಕಲಾವಿದರಲ್ಲದೇ ಉಡುಪಿಯ ನಾಗರಿಕರೂ ಕಟ್ಟಡ ನೆಲಸಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


Leave a Comment