ಕಾರವಾರ ಕಡಲತೀರದಲ್ಲಿ ಮಂಗಳವಾರದಂದು ಇಂಡೋಫೆಸಿಫಿಕ್ ಹಂಪ್‌ಬ್ಯಾಕ್ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಕಾರವಾರ ವಿಭಾಗದ ಉಪರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಪ್ರಶಾಂತ ಕುಮಾರ್ ಕೆ. ರವರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತ ಡಾಲ್ಫಿನ್ ಗಂಡಾಗಿದ್ದು, ಸುಮಾರು 7 ರಿಂದ 8 ತಿಂಗಳ ಮರಿಯಾಗಿದೆ. ತಲೆಯ ಒಳಗೆ ಆಂತರಿಕ ಗಾಯ ಕಂಡು ಬಂದಿದ್ದು, ಯಾವುದೋ ಘನವಸ್ತುವಿನ ಘರ್ಷಣೆಯಿಂದ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಕೋಸ್ಟಲ್ ಮತ್ತು ಮರೈನ್ ವಲಯ
ಅರಣ್ಯಾಧಿಕಾರಿಗಳಾದ ಪ್ರಮೋದ ಬಿ, ರೀಪ್ ವಾಚ್ ಕುಂದಾಪುರದ ಡಾ. ತೇಜಸ್ವಿನಿ, ವಿಜ್ಞಾನ ಉಪಕೇಂದ್ರದ ಡಾ.ಸಂಜೀವ ದೇಶಪಾಂಡೆ, ಸಂಶೋಧನಾ ವಿದ್ಯಾರ್ಥಿ ಶಾನ ನವಾಜ್, ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ ಕಟ್ಟಿಮನಿ, ಅರಣ್ಯ ಪಾಲಕರಾದ ಅರಣಕುಮಾರ್, ಮಲ್ಲೇಶ, ಹನುಮಂತ ಡೊಕ್ಕಣ್ಣನವರ ಇದ್ದರು.















