ಸತತ ಐದು ದಿನದಿಂದಲೂ ಹುಡುಕಾಟ ನಡೆಸಿ ಸಬ್‌ಮೆರಿನ್ ಸ್ಫೋಟಗೊಂಡು ಅದರಲ್ಲಿದ್ದ ಐವರು, ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ. ಟೈಟಾನಿಕ್ ಹಡಗಿನ ಅವಶೇಷಗಳಿಂದ 1,600 ಮೀಟರ್ ಕೆಳಕ್ಕೆ ಕಂಡಿರುವ ತ್ಯಾಜ್ಯ ಆಧರಿಸಿ ಅಮೆರಿಕಾ ಕೋಸ್ಟಲ್ ಗಾರ್ಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ರಿಮೋಟ್ ಕಂಟ್ರೋಲ್ ವಾಹನ ನಡೆಸಿದ್ದ ತಪಾಸಣೆ ಹಾಗೂ ನೀಡಿದ ಮಾಹಿತಿ ಆಧರಿಸಿ ಸಬ್‌ಮೆರಿನ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಮೃತಪಟ್ಟಿರುವುದು ಖಚಿತವಾಗಿದ್ದು, ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ರಿಯಲ್ ಆಡ್ಮಿರಲ್ ಜಾನ್ ಮಾಗರ್ ತಿಳಿಸಿದ್ದಾರೆ.
ಈ ಸಬ್‌ಮೆರಿನ್‌ನಲ್ಲಿ 98 ಗಂಟೆ ಕಾಲ ಆಮ್ಲಜನಕ ಪೂರೈಕೆ ಸಾಮರ್ಥ್ಯ ಇದ್ದ ಸಬ್‌ಮೆರಿನ್ ಅವಧಿ ಮುಗಿದ ನಂತರ ಸ್ಫೋಟಗೊಂಡಿತ್ತು. ಅದರ ಸಂಪರ್ಕವೂ ಆನಂತರ ತಜ್ಞರಿಗೆ ಸಿಕ್ಕಿರಲಿಲ್ಲ. ವಿಶ್ವದ ನಾನಾ ಭಾಗಗಳ ತಜ್ಞರ ತಂಡಪ ಹಲವು ರೀತಿಯಲ್ಲಿ ಸಬ್ ಮೆರಿನ್‌ನಲ್ಲಿರುವ ಐವರ ರಕ್ಷಣೆಗೆ ಪ್ರಯತ್ನ ನಡೆಸಿತ್ತು. ರೇಡಾರ್ ಸಾಮರ್ಥ್ಯವುಳ್ಳ ಎಸಿ-130 ವಿಮಾನವನ್ನು ಕಣ್ಮರೆಯಾದ ಸಬ್‌ಮೆರಿನ್ ಹುಡುಕಾಟಕ್ಕೆ ರವಾನಿಸಲಾಗಿತ್ತು. ಒಂದು ಬಾರಿ
ಸಬ್‌ಮೆರಿನ್ ಭಾಗದ ಶಬ್ದಗಳು ಬಂದಿದ್ದರಿಂದ ಹುಡುಕಾಟ ತೀವ್ರಗೊಂಡಿತ್ತು. ಆನಂತರ ಆ ಶಬ್ದ ಇದರದ್ದಲ್ಲ ಎನ್ನುವುದು ತಿಳಿದು ಬಂದಿದೆ.
ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನ ಕರಾವಳಿಯಿಂದ 400 ಮೈಲಿ ದೂರದಲ್ಲಿ ಟೈಟಾನಿಕ್ ಹಡಗುಗಳ ಅವಶೇಷಗಳಿವೆ. ಇದನ್ನು ನೋಡೋದಕ್ಕೆ ಪ್ರವಾಸಿಗರು ಎರಡೂ ಕೋಟಿ ರೂಪಾಯಿಗೂ ಹೆಚ್ಚು ಹಣ ಪಾವತಿ ಮಾಡಿರುತ್ತಾರೆ. ಈ ಜಲಾಂತರ್ಗಾಮಿಯಲ್ಲಿ ಒಟ್ಟಾರೆ 98 ಗಂಟೆಗಳ ಆಕ್ಸಿಜನ್ ಸಪ್ಲೇ ಇರುತ್ತದೆ.















