ಮಕ್ಕಳ ಎದುರೇ ಸಮುದ್ರದಲೆಯಲ್ಲಿ ಕೊಚ್ಚಿ ಹೋದ ತಾಯಿ

Coastal Bulletin
ಮಕ್ಕಳ ಎದುರೇ ಸಮುದ್ರದಲೆಯಲ್ಲಿ ಕೊಚ್ಚಿ ಹೋದ ತಾಯಿ

ಮುಂಬೈನ ಬಾಂದ್ರಾ ಸಮುದ್ರ ತೀರದಲ್ಲಿ ಜ್ಯೋತಿ ಸೋನಾರ್ ಎಂದು ಗುರುತಿಸಲಾದ 32 ವರ್ಷದ ಮಹಿಳೆ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋದ ವಿಡಿಯೋಂದು ಸಾಮಾಜಿಕ ಜಾಲಾತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ.

ಫೋಟೋ ತೆಗೆಸಿಕೊಳ್ಳಲೆಂದು ಬಂಡೆಯ ಮೇಲೆ ಕುಳಿತಿದ್ದ ವೇಳೆ ರಭಸದಿಂದ ಬಂದ ಅಲೆಯು ಮಹಿಳೆಯನ್ನು ಕೊಚ್ಚಿಕೊಂಡು ಹೋಗಿದೆ. ಪ್ರತಿ ವಾರಕ್ಕೊಮ್ಮೆ ಮುಖೇಶ್ ಕುಟುಂಬ ತಪ್ಪದೇ ಪಿಕ್ನಿಕ್‌ಗೆ  ತೆರಳುತ್ತಿತ್ತು. ಆದರೆ ಈ ಭಾರೀ ಜುಹು ಚೌಪಾಟಿಗೆ ಭೇಟಿ ನೀಡಿದ್ದರು. ಆದರೆ ಬೀಚ್‌ಗೆ ಪ್ರವೇಶ ಅಂದು ನಿರ್ಬಂಧವಾಗಿತ್ತು.

ಹೀಗಾಗಿ ಬೇಲ್ಪುರಿ ಕೇಂದ್ರದಲ್ಲಿ ಊಟ ಮಾಡಲು ಮುಖೇಶ್ ಕುಟುಂಬ ನಿರ್ಧರಿಸಿತ್ತು. ಆದರೆ ಕೊನೆಯಲ್ಲಿ ಬಾಂದ್ರಾ ಕಡೆ ಹೋಗಲು ನಿರ್ಧರಿಸಿದ ಈ ಕುಟುಂಬಕ್ಕೆ ಇಂತಹದ್ದೊಂದು ಆಘಾತ ಎದುರಾಗಿದೆ.

ಪತಿ ಮುಖೇಶ್ ಹಾಗೂ ಅವರ ಮೂವರು ಮಕ್ಕಳು ಸೋನಾರ್ ಅಲೆಯಲ್ಲಿ ಕೊಚ್ಚಿ ಹೋದರೂ ಬಚಾವು ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. 


Leave a Comment