ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ ಜಿಲ್ಲೆಯ 20ಮಂದಿ ಸುರಕ್ಷಿತ

Coastal Bulletin
ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ ಜಿಲ್ಲೆಯ 20ಮಂದಿ ಸುರಕ್ಷಿತ

ಅಮರನಾಥ ಯಾತ್ರೆಗೆ ಅದೇಷ್ಟೋ ಜನರು ತೆರಳಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದು ಬರೋಬ್ಬರಿ 300ಕ್ಕೂ ಹೆಚ್ಚು ಯಾತ್ರಿಕರು. ಆದರೆ ಅಮರನಾಥ ಯಾತ್ರೆಗೆ ತೆರಳುವ ಮಾರ್ಗದಲ್ಲಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಮಾರ್ಗಮಧ್ಯೆ ಸಿಲುಕಿಕೊಂಡು ಯಾತ್ರಿಕರು ಸಂಕಷ್ಟದಲ್ಲಿದ್ದರು, ಭಾನುವಾರ ಅಲ್ಲಿ ಕಡಿಮೆಯಾಗಿದ್ದು, ಯಾತ್ರಿಕರು ಉಳಿದಿದ್ದ ಬೇಸ್‌ಕ್ಯಾಂಪ್‌ನಿಂದ ಪ್ರಯಾಣ ಮುಂದುವರೆಸಿದ್ದಾರೆ.

ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ ಜಿಲ್ಲೆಯ 20 ಮಂದಿ ಕೂಡ ಸುರಕ್ಷಿತವಾಗಿದ್ದರೆ ಎಂದು ತಂಡದ ನೇತೃತ್ವವನ್ನು ವಹಿಸಿರುವ ನರಿಕೊಂಬಿನ ಸಂತೋಷ್ ಮಾರುತಿನಗರ ಅವರು ತಿಳಿದ್ದಾರೆ. ಇವರುಗಳು

ತಂಗಿರುವ ಆಶ್ರಮದಿಂದ 280 ಕಿ.ಮೀ ಇದ್ದು, ಮಿಲಿಟರಿ ಅವರು ಹೋಗಲು ಅನುವು ಮಾಡಿದ ಕೂಡಲೇ ಅಮರನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ವಾಪಸು ಬರುತ್ತೇವೆ ಎಂದು ತಿಳಿಸಿದ್ದಾರೆ. 


Leave a Comment