ಒಂದೇ ತಟ್ಟೆಯಲ್ಲಿ ಊಟ ಮಾಡಿದ ಶೆಟ್ಟಿ ಸ್ನೇಹಿತರು

Coastal Bulletin
ಒಂದೇ ತಟ್ಟೆಯಲ್ಲಿ ಊಟ ಮಾಡಿದ ಶೆಟ್ಟಿ ಸ್ನೇಹಿತರು

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ೪೦ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನಲೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅಭಿಮಾನಿಗಳನ್ನು ಈಗಾಗಲೇ ಭೇಟಿಯಾಗಿದ್ದಾರೆ. ಇದೇ ವೇಳೆ ಅಭಿಮಾನಿಗಳಿಂದ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದೇ ವೇಳೆ ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಕಳೆದ ರಾತ್ರಿ ನೆನಪಿಟ್ಟುಕೊಳ್ಳುವಂತಹ ಒಂದು ರಾತ್ರಿಯಾಗಿತ್ತು. ರಿಷಬ್ ಬರ್ತ್ಡೇ ಸೆಲೆಬ್ರೇಷನ್ ಮಾಡಿದೇವು. ಅದು ಇದಕ್ಕಿಂತ ಸುಂದರವಾಗಿರಲು ಸಾಧ್ಯವಿಲ್ಲ. ನನಗೆ ನಿಜಕ್ಕೂ

ಈ ಕ್ಷಣ ತುಂಬಾ ಇಷ್ಟಾಗಿದೆ. ಹಾಗಾಗಿ ಇದನ್ನು ಯಾಕೆ ಸೋಷಿಯಲ್ ಮೀಡಿಯದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಬಾರದು ಎಂದೆನಿಸೆ ಶೇರ್ ಮಾಡಿದೆ ಎಂದು ಬರೆದಿದ್ದಾರೆ.


Leave a Comment