ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಕಾಂಗ್ರೆಸ್ ಅನುಮಾನಾಸ್ಪದ ಮೌನವೇಕೆ? – ಕೇರಳ ಸಿಎಂ

Coastal Bulletin
ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಕಾಂಗ್ರೆಸ್ ಅನುಮಾನಾಸ್ಪದ ಮೌನವೇಕೆ? – ಕೇರಳ ಸಿಎಂ

ಏಕರೂಪ ನಾಗರಿಕ ಸಂಹಿತೆ ಕುರಿತು ಕಾನೂನು ಆಯೋಗವು ಜನರು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಅನಿಸಿಕೆಗಳನ್ನು ಕೋರಿದೆ. ಈ ಬಗ್ಗೆ ಇದೀಗ ರಾಜಕೀಯ ಶುರುವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಯುಸಿಸಿ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಆಗ್ರಹಿಸಿದ್ದಾರೆ.

 ಯುಸಿಸಿ ವಿಚಾರದಲ್ಲಿ ಕಾಂಗ್ರೆಸ್ ಅನುಮಾನಾಸ್ಪದ ಮೌನವಹಿಸಿದ್ದು, ಸಂಘ ಪರಿವಾರ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು ಏಕರೂಪ ನಾಗರಿಕ ಸಂಹಿತೆ ಕುರಿತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಪಷ್ಟ ನಿಲುವನ್ನು ಹೊಂದಿದೆಯೇ ಎಂದು ಕೇಳಿದ್ದಾರೆ.

ಅಲ್ಲದೇ ಕಾಂಗ್ರೆಸ್ ಅನುಮಾನಾಸ್ಪದ ಮೌನವು ಮೋಸದಾಯಕ. ಭಾರತದ

ಬಹುತ್ವದ ಮೇಲೆ ಸಂಘಪರಿಹಾರದ ಹೇರಿಕೆಗಳನ್ನು ವಿರೋಧಿಸಲು ಮತ್ತು ಸಂಘವರಿವಾರದ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ದವಾಗೊದೆಯೇ? ಚುನಾವಣಾ ರಾಜಕೀಯದಲ್ಲಿ ಬಿಜೆಪಿಯನ್ನು ವಿರೋಧಿಸುವುದನ್ನು ಹೊರತುಪಡಿಸಿ, ದೇಶದ ಉಳಿವಿನ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಸಂಘಪರಿವಾರದ ವಿರುದ್ಧ ನಿಲ್ಲಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದ್ದಾರೆ. 



Leave a Comment