Coastal Bulletin

ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಮೇಳೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನಿನ ವಿಚಾರದಲ್ಲಿ ಸ್ಥಳೀಯ ನಿವಾಸಿಗಳಾದ ನೀಲಮ್ಮ ಮತ್ತು ಮೋಹನ್ ಎನ್ನುವವರು ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಅನುಗೌಡ ಸಾಗಾರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸ್ಟಡಿಯಲ್ಲಿ ಜಮೀನನ್ನು ಅನುಗೌಡ ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದು,

ಅನುಗೌಡ ಆಗಾಗ ಬೆಂಗಳೂರಿನಿಂದ ಬಂದು ಹೋಗುತ್ತಿದ್ದರು. 

ಇವರು ತಮಿಳು ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ಶಿವರಾಜ್‌ಕುಮಾರ್, ಪುನಿತ್ ರಾಜ್‌ಕುಮಾರ್ ಹಾಗೂ ಸುದೀಪ್ ಸಿನಿಮಾಗಳಲ್ಲಿ ಸೈಡ್ ಆ್ಯಕ್ಟಿಂಗ್ ಮಾಡಿದ್ದಾರೆ.


Leave a Comment