Coastal Bulletin

ರಾಮನಗರ: ಮಹಿಳೆಯೊಬ್ಬರು ನವಿಲೊಂದರ ವಿರುದ್ಧ ದೂರು ದಾಖಲಿಸಿರುವ ಘಟನೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಗ್ರಾಮ ಸುತ್ತಮುತ್ತ ನವಿಲುಗಳ ಕಾಟ ಜಾಸ್ತಿಯಾಗಿದ್ದು, ಗ್ರಾಮದ ಲಿಂಗಮ್ಮ ಎಂಬವರ ಮೇಲೆ ನವಿಲು ದಾಳಿ ಮಾಡಿ ಗಾಯಗೊಳಿಸಿದೆ.

ಲಿಂಗಮ್ಮ ನವರು ತಮ್ಮ ಹಿತ್ತಲನಲ್ಲಿ ಕೆಲಸ ಮಾಡುತ್ತಿದ್ದಾಗ  ಮನೆ ಮೇಲೆ ನವಿಲು ಕಾಣಿಸಿಕೊಂಡಿದೆ. ಹಿತ್ತಲಿನಲ್ಲಿ ಹಾಕಿದ್ದ ಗಿಡಗಳನ್ನು ಹಾಳು ಮಾಡುತ್ತದೆ ಎಂದು ನವಿಲು ಓಡಿಸಲು ಹೋದ ಇವರ ಕಣ್ಣಿಗೆ ಕುಕ್ಕಲು ಮುಂದಾಗಿದೆ. ತಕ್ಷಣ ಇವರು ತಪ್ಪಿಸಿಕೊಂಡ ಹಿನ್ನಲೆ ಹಣೆ ಮೇಲೆ ಕುಕ್ಕಿ ಗಾಯಗೊಳಿಸಿದೆ. ದಾಳಿಯಿಂದ ತೀವ್ರ

ಗಾಯ ಗೊಂಡಿದ್ದ ಇವರು ಬಿ.ವಿ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು, ಹಣೆಗೆ ಹೊಲಿಗೆ ಹಾಕಿದ್ದಾರೆ.  ಇದೀಗ ಮಹಿಳೆ ನವಿಲು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. 

ಇದೀಗ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದು, ಕಳೆದ ೩ದಿನಗಳಿಂದ ನವಿಲು ಸೆರೆಗೆ ಮುಂದಾಗಿದ್ದಾರೆ.


Leave a Comment