ರಿಲಯನ್ಸ್ ಜಿಯೋ ಕಂಪೆನಿ ಸೋಮವಾರ ಜಿಯೋಭಾರತ್ ಫೋನ್ ಅನ್ನು ರೂ 999ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮೊದಲ ಒಂದು ಮಿಲಿಯನ್ ಜಿಯೋಭಾರತ್ ಫೋನ್‌ಗಳ ಬೀಟಾ ಪ್ರಯೋಗ ಜುಲೈ 7 ರಂದು ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.
ಭಾರತದಲ್ಲಿ ಇಂದು ಇಂಟರ್‌ನೆಟ್ ಕ್ರಾಂತಿಯೇ ನಡೆದಿದ್ದು, ಫೋನ್ ಮೂಲಕವೇ ಬಹುತೇಕ ಕಾರ್ಯಗಳನ್ನು ಮಾಡಬಹುದಾಗಿದೆ. ಇದರ ಮಧ್ಯೆಯೂ ಭಾರತದಲ್ಲಿ 25 ಕೋಟಿ ಮಂದಿ ಈಗಲೂ ಸಹ ಫೀಚರ್ ಫೋನ್ ಬಳಸುತ್ತಿದ್ದು, ಹೀಗಾಗಿ ರಿಲಯನ್ಸ್ ಜೊಯೋ, ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಇಂಟರ್‌ನೆಟ್ ಸೌಲಭ್ಯ ಇರುವ ಜಿಯೋ ಭಾರತ್ ೪ಜಿ ಫೋನ್ ಬಿಡುಗಡೆ ಮಾಡಿದೆ. ಇದರ ಬಳಕೆ ಶುಲ್ಕವೂ ಸಹ ಅತ್ಯಂತ ಕಡಿಮೆ ಇರಲಿದೆ ಎಂದು ರಿಲಯನ್ಸ್ ಜಿಯೋ ಕಂಪೆನಿ ತಿಳಿಸಿದೆ.
ಹೊಸ
ಜಿಯೋ ಭಾರತ್ ಫೋನ್ ನಾವೀನ್ಯತೆಯ ಕೇಂದ್ರವಾಗಿದೆ ಮತ್ತು ಇದು ಅರ್ಥಪೂರ್ಣ, ನೈಜ್-ಜೀವನದ ಬಳಕೆಯ ಪ್ರಕರಣಗಳೊಂದಿಗೆ ವಿವಿಧ ಭಾಗಗಳ ಬಳಕೆದಾರರಿಗೆ ಅಸಮಾನ ಮತ್ತು ನಿಜವಾದ ಮೌಲ್ಯವನ್ನು ತರುವಲ್ಲಿ ನಮ್ಮ ಗಮನವಿದೆ. ಮಾತ್ರವಲ್ಲ ಈ ಸಾಧನದ ಬೆಲೆಯೂ ಕೇವಲ ರೂ999, ಮಾಸಿಕ ಯೋಜನೆ ತಿಂಗಳಿಗೆ 123 ಮತ್ತು ವಾರ್ಷಿಕ ಯೋಜನೆಗಳು ರೂ. 1234. ಎರಡೂ ಯೋಜನೆಗಳು ಅನಿಯಮಿತ ಕರೆ ಮತ್ತು ತಿಂಗಳಿಗೆ 14 ಜಿಬಿ ಡೇಟಾವನ್ನು ಒಳಗೊಂಡಿದೆ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.
















