Coastal Bulletin

ಕಾಂಗ್ರೆಸ್ ಸರ್ಕಾರವು ಅದಿಕಾರಕ್ಕೆ ಬಂದ ಕೂಡಲೇ ಜನರಿಗಾಗಿ 5 ಗ್ಯಾರಂಟಿಗಳನ್ನು ಘೋಷಣೆಯನ್ನು ಮಾಡಿತ್ತು. ಅದೇ ಮಾತಿನಂತೆ ಉಚಿತ ಪ್ರಯಾಣ ಶಕ್ತಿ ಯೋಜನೆ ಜಾರಿಗೊಳಿಸಿದ್ದು, ಇದೀಗ ಅನ್ನಭಾಗ್ಯ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಇಂದಿನಿಂದ ಅಂದರೆ ಜುಲೈ 1 ರಿಂದ ಅನುಷ್ಠಾನಕ್ಕೆ ತರಲು ಸಿದ್ದತೆಯನ್ನು ಮಾಡಲಾಗಿದೆ.

ಜುಲೈ 3 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷ ಹೋರಾಟಕ್ಕೆ ಸಜ್ಜಾಗಿದೆ. ಈ ನಡುವೆ ಸರ್ಕಾರ ಯೋಜನೆ ಚಾಲನೆ ಕೊಡುವ ಮೂಲಕ ಹೋರಾಟದ ತೀವ್ರತೆ ಕುಗ್ಗುವಂತೆ ಮಾಡುತ್ತಿದೆ. 

ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತಾಗಿ ರಾಜ್ಯ ಸರ್ಕಾರದಿಂದ ಐದು ಕೆಜಿ ಅಕ್ಕಿಯ ಬದಲು ತಕ್ಷಣಕ್ಕೆ

ಹಣ ನೀಡಲು ಉದ್ದೇಶಿಸಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಬಿಪಿಟಲ್ ಕಾರ್ಡ್ ದಾರರ ಖಾತೆಗೆ ಹಣ ಜಮಾ ಆಗಲಿದೆ. ಹಾಗೂ, ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್ ಮನಿಯಪ್ಪ ಹೇಳಿದರು.  


Leave a Comment