ಮಂತ್ರಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಪ್ರತಿ ತಿಂಗಳಿನಂತೆ ಜೂನ್ ತಿಂಗಳಲ್ಲೂ ಸಹ ಭಕ್ತಸಾಗರವೇ ಹರಿದುಬಂದಿದ್ದು, ಹುಂಡಿಗೆ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಬೇರೆ-ಬೇರೆ ರಾಜ್ಯಗಳಿಂದ ರಾಯರ ದರ್ಶನಕ್ಕೆ ಭಕ್ತರು ಬಂದಿದ್ದು, ಜೂನ್ ತಿಂಗಳ 27 ದಿನಗಳಲ್ಲಿ ಕೋಟ್ಯಂತರ ರೂ. ದೇಣಿಗೆ ಸಂಗ್ರಹವಾಗಿದೆ.
ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಒಟ್ಟು 2,89,96,295 ರೂ ಕಾಣಿಕೆ ಸಂಗ್ರಹವಾಗಿದೆ. ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ 2,84,12,635 ರೂ ಕರೆನ್ಸಿ ನೋಟುಗಳು ಹಾಗೂ 5,83,660 ರೂ ನಾಣ್ಯಗಳ
ಸಂಗ್ರಹವಾಗಿದೆ.
57 ಗ್ರಾಂ ಚಿನ್ನ ಹಾಗೂ 910 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು ಹಾಗೂ ನೂರಾರು ಜನ ಸಿಬ್ಬಂದಿ ಹಾಘೂ ಭಕ್ತರು ಕಾಣಿಕೆ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.















