ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದವರು ದಾರುಣವಾಗಿ ಮೃತಪಟ್ಟಿದ್ದಾರೆ. ಜಲಾಂತರ್ಗಾಮಿ ಸ್ಪೋಟದ ತೀವ್ರತೆಯಿಂದಾಗಿ ಮೃತಪಟ್ಟ ಯಾರ ದೇಹವೂ ಸಿಕ್ಕಿರಲಿಲ್ಲ. ಇದೀಗ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿದ್ದು, ಅದರ ಜತೆಯಲ್ಲಿ ಮನುಷ್ಯ ದೇಹದ ಭಾಗಗಳು ಪತ್ತೆಯಾಗಿವೆ ಇದು ಮೃತರ ಅವಶೇಷಗಳು ಇರಬಹುದೆಂದು ಭಾವಿಸಲಾಗಿದೆ ಎಂದು ಅಮೆರಿಕ ಕರಾವಳಿ ಪಡೆ ಬುಧವಾರ ತಿಳಿಸಿದೆ.
ವಶಕ್ಕೆ ಪಡೆಯಲಾಘಿರುವ ಮಾನವ ಅವಶೇಷಗಳೆಂದು ಭಾವಿಸಿರುವುದನ್ನು ಯುನೈಟೆಡ್ ಸ್ಟೇಟ್ಸ್ ವೈದ್ಯಕೀಯ ವೃತ್ತಿಪರರು ಔಪಚಾರಿಕ ವಿಶ್ಲೇಷಣೆಯನ್ನು ನಡೆಸಲಿದ್ದಾರೆ.
ಮತ್ತೆ ಇನ್ನೊಂದು ಈ ದುರಂತ ಮರುಕಳಿಸದಂತೆ ತಡೆಯಲು ಮತ್ತು
ಪ್ರಸ್ತುತ ದುರಂತಕ್ಕೆ ಕಾರಣ ಏನೆಂದು ತಿಳಿಯಲು ಸಾಕಷ್ಟು ಕೆಲಸ ನಡೆಯಬೇಕಿದೆ ಎಂದು ಯುಎಸ್ ಪರ ದುರಂತ ತನಿಖೆ ನೇತೃತ್ವದ ವಹಿಸಿರುವ ಕ್ಯಾಪ್ಟನ್ ನ್ಯೂಬೌರ್ ತಿಳಿಸಿದ್ದಾರೆ.















