Coastal Bulletin

ಕೊಲ್ಲಂ: ಕಡಕ್ಕಲ್ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವೃದ್ಧೆಯ ಮೃತದೇಹದ ಬದಲಿಗೆ ಮತ್ತೊಂದು ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಿದ್ದು. ಮನೆಗೆ ತೆರಳಿದ ಬಳಿಕ ಶವಸಂಸ್ಕಾರದ ವೇಳೆ ಶವ ಬದಲಾಗಿದ್ದು ಗೊತ್ತಾಗಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಕ್ಕಲ್ ವಾಚಿಕೋಣಂ ಮೂಲದ ವೃದ್ಧ ವಾಮದೇವ (68) ಎಂಬಾತ ಅನಾರೋಗ್ಯದಿಂದ ನಿಧನರಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ನೀಡಿದ್ದರು. ಈ ವೇಳೆ ಅದು ಬದಲಾಗಿ ರಾಜೇಂದ್ರನ್ ನೀಲಕಂದನ್ ಎಂಬಾತನ ಶವವನ್ನು ನೀಡಲಾಗಿತ್ತು. ಮನೆಗೆ ತಂದು ಪರೀಶೀಲಿಸಿದ ಬಳಿಕ ಶವ ಬದಲಾಗಿದ್ದನ್ನು ಪತ್ತೆ ಮಾಡಿದ್ದಾರೆ. ತಕ್ಷಣವೇ ಮೃತದೇಹವನ್ನು ಆಸ್ಪತ್ರೆಗೆ

ತೆಗೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. 

ತಡಾಬಡಿಸಿದ ಸಿಬ್ಬಂದಿ ಆದ ಅಚಾತುರ್ಯವನ್ನು ಸರಿ ತಿದ್ದಿಕೊಂಡು ಸರಿಯಾದ ದೇಹವನ್ನು ವೃದ್ದನ ಸಂಬಂಧಿಕರಿಗೆ ಹಸ್ತಾಂತರಿಸಿದರು. ಸರಿಯಾದ ಮೃತದೇಹದೊಂದಿಗೆ ಮನೆಗೆ ಮರಳಿ, ಅಂತ್ಯಕ್ರಿಯೆಯ ವಿಧಿಗಳನ್ನು ಮುಗಿಸಿದರು. ಆಸ್ಪತ್ರೆಯಲ್ಲಾದ ಘಟನೆಯ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಈ ಬಗ್ಗೆ ವಿವರವಾದ ತನಿಖೆಯನ್ನು ನಡೆಸಲು ಸೂಚಿಸಿದೆ. 


Leave a Comment