ಪುತ್ತೂರು: ಚೂರಿ ಇರಿತಕ್ಕೆ ಒಳಗಾದ ಯುವತಿ ಸಾವು

Coastal Bulletin
ಪುತ್ತೂರು: ಚೂರಿ ಇರಿತಕ್ಕೆ ಒಳಗಾದ ಯುವತಿ ಸಾವು

ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಯುವಕನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ, ಯುವತಿ ಸಾವನ್ನಪ್ಪಿದ್ದಾಳೆ. ವಿಟ್ಲದ ಅಳಿಕೆ ನಿವಾಸಿ ಗೌರಿ 18 ಮೃತ ಯುವತಿ.

ಪದ್ಮರಾಜ್  ಆರೋಪಿ ಎಂದು ಗುರುತಿಸಲಾಗಿದೆ. 

ಈತ ಬೈಕ್‌ನಲ್ಲಿ ಬಂದು ಹಲವು ಬಾರಿ  ಹಲವು ಬಾರಿ ದಾಳಿ ಮಾಡಿದ್ದಾನೆ. ಮಾತ್ರವಲ್ಲ ಕೃತ್ಯ ಎಸಗಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಾಳು ಗೌರಿಯನ್ನು ಪುತ್ತೂರು

ಸರಕಾರಿ ಆಸ್ಪತ್ರೆಗೆ ತಂದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆ ದಾರಿಯಲ್ಲಿ ಆಕೆ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿದೆ. 


Leave a Comment