ನಟಿ ಜಯಪ್ರದಾಗೆ 6 ತಿಂಗಳ ಕಾಲ ಜೈಲು ಶಿಕ್ಷೆ

Coastal Bulletin
ನಟಿ ಜಯಪ್ರದಾಗೆ 6 ತಿಂಗಳ ಕಾಲ ಜೈಲು ಶಿಕ್ಷೆ

ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ನ್ಯಾಯಾಲಯ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಇಎಸ್‌ಐ ಹಣ ಪಾವತಿಸಿಲ್ಲ ಎಂದು ಕಾರ್ಮಿಕರು ರಾಜ್ಯ ವಿಮಾ ನಿಗಮಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಚೆನ್ನೆöÊ ಎಗ್ಮೋರ್ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 

ಸಿಬ್ಬಂದಿಗೆ ಸಂಪೂರ್ಣ ಹಣ ನೀಡುವುದಾಗ ಭರವಸೆ ನೀಡಿದ ನಟಿ, ಪ್ರಕರಣವನ್ನು ವಜಾಗೊಳಿಸುವಂತೆ ನ್ಯಾಯಾಲಕ್ಕೆ

ಮನವಿ ಮಾಡಿದರು. ಆದರೆ ಕಾರ್ಮಿಕ ಸರ್ಕಾರಿ ವಿಮಾ ನಿಗಮದ ವಕೀಲರು ಆಕೆಯ ಮನವಿಯನ್ನು ವಿರೋಧಿಸಿದರು, ನಂತರ ಜಯಪ್ರದಾ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿ ಚಿತ್ರಮಂದಿರ ಎಲ್ಲಾ ಕಾರ್ಮಿಕರಿಗೆ ತಲಾ ೫,೦೦೦ ರೂ ಗಳ ದಂಡ ಕಟ್ಟುವಂತೆಯೂ ತಿಳಿಸಲಾಗಿದೆ. 


Leave a Comment