ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ ಆರಂಭ

Coastal Bulletin
ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ ಆರಂಭ

ಈ ಹಿಂದೆ ಚಂದ್ರಯಾನ-2 ಉಡಾವಣೆ ಸಂದರ್ಭದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ವಿಫಲವಾಗಿದ್ದು, ಇದೀಗ ಇಸ್ರೋದ ಅತ್ಯಂತ ಮಹತ್ವಾಕಾಂಕ್ಷಿ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಶ್ರೀ ಹರಿಕೋಟಾದಿಂದ ಚಂದ್ರಯಾನ-3 ರಾಕೆಟ್ ಉಡಾವಣೆಯಾಗಲಿದೆ.

ಪ್ರತಿ ಸಲ ರಾಕೆಟ್ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ಈ ಸಲನೂ ಇಸ್ರೋ ವಿಜ್ಞಾನಿಗಳು ಪೂಜೆಗಳನ್ನು ಮಾಡಿದ್ದಾರೆ. ಲಡಾಖ್ ಸೈನ್ಸ್ ಫೌಂಡೇಶನ್ ಚಂದ್ರಯಾನ-3 ವೀಕ್ಷಣೆಗೆ ಬೆಂಗಳೂರಿನಿಂದ 130 ಜನರನ್ನು ಕರೆದೊಯ್ಯುತ್ತಿದ್ದು, 100 ಕ್ಕೂ ಹೆಚ್ಚು ಕನ್ನಡಿಗರು ಈ

ಗುಂಪಿನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿದೆ. 

ಚಂದ್ರನ ಮೇಲೆ ರೋಮರ್ ಇಳಿಸುವುದು ಮತ್ತು ಆ ಸ್ಥಳದಲ್ಲಿ ವೈಜ್ಞಾನಿಕ ಪ್ರಯೊಗಗಳನ್ನು ನಡೆಸುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ. ಇಸ್ರೋ ನೌಕೆಯು ಚಂದ್ರನ ನೆಲದಲ್ಲಿ ಇಳಿಯಲು 45 ರಿಂದ 48 ದಿನಗಳು ತೆಗೆದುಕೊಳ್ಳಬಹುದು ಎಂದು ಇಸ್ರೋದ ವಿಜ್ಞಾನಿಗಳು ತಿಳಿಸಿದ್ದಾರೆ.


Leave a Comment