ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸುದ್ದಿ ನಿರೂಪಕರು ಭಾರತೀಯ ಟಿವಿ ಸುದ್ದಿ ಉದ್ಯಮಕ್ಕೆ ಪ್ರವೇಶಿಸಲು ಪ್ರಾರಂಭಿಸಿದಾಗ, ಕನ್ನಡ ಚಾನೆಲ್ ಪವರ್ ಟಿವಿ ದಕ್ಷಿಣ ಭಾರತದ ಮೊದಲ ಎಐ ಸುದ್ದಿ ನಿರೂಪಕರನ್ನು ಪ್ರಾರಂಭಿಸಿದೆ. ಮಾತ್ರವಲ್ಲ ನ್ಯೂಸ್ ಫಸ್ಟ್ ವಾಹಿನಿ ಕೂಡ ಎಐ ಮಾಯಾ ಹೆಸರಿನ ಆ್ಯಂಕರ್ ಮೂಲಕ ನಿರೂಪಣೆಯನ್ನು ಮಾಡಿಸಿದೆ. ಈ ಮೂಲಕ ಕನ್ನಡ ಎರಡು ಸುದ್ದಿವಾಹಿಸಿಗಳು ಎಐ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಐ ಆ್ಯಂಕರ್‌ಗಳು ಈಗಿನ ಹಲವು ವಾರ್ತಾ ನಿರೂಪಕ-ನಿರೂಪಕಿಯರ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ದೇಶದ ಇತರ ಕೆಲವು ಚಾನೆಲ್‌ಗಳು ತಮ್ಮದೇ ಆದ ಎಐ ಚಾಲಿತ ಸುದ್ದಿ ನಿರೂಪಕರೊಂದಿಗೆ ಬಂದಿದೆ, ಇತ್ತೀಚೆಗೆ, ಒಟಿವಿ ಎಂಬ ಒಡಿಯಾ ಚಾನೆಲ್ ರಾಜ್ಯದ ಮೊದಲ ಎಐ ಸುದ್ದಿ ನಿರೂಪಕಿ ಲೀಸಾ ಅವರನ್ನು ಪ್ರಾರಂಭಿಸಿತು. ಇಂಗ್ಲೀಪ್ ಮತ್ತು ಒಡಿಯಾ ಎರಡರಲ್ಲೂ ದೋಷರಹಿತ ಸುದ್ದಿ
ಪ್ರಸ್ತುತಿ ಅನೇ ಕ ಜನರನ್ನು ಪ್ರಭಾವಿಸಿದೆ.
ಇಂಡಿಯಾ ಟುಡೆ ಗ್ರೂಪ್ ಮಾರ್ಚ್ ನಲ್ಲಿ ತಮ್ಮ ಹಿಂದಿ ಚಾನೆಲ್ ಆಜ್ ತಕ್ ದೇಶದ ಮೊದಲ ಎಐ ಸುದ್ದಿ ನಿರೂಪಕಿ ಸನಾ ಅವರನ್ನು ಪ್ರಾರಂಭಿಸಿತು. ಈ ಎಐ ಮಾಯಾಗೆ ಸಾಮಾನ್ಯ ಸುದ್ದಿ ನಿರೂಪಕರ ರೀತಿಯೇ ಎಲ್ಲವನ್ನೂ ಪ್ರಸ್ತುತ ಪಡಿಸುವ ಸಾಮರ್ಥ್ಯವಿದೆ.















