ಯುಸಿಸಿ ಜಾರಿ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

Coastal Bulletin
ಯುಸಿಸಿ ಜಾರಿ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ತಿರುವನಂತಪುರ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸದಂತೆ ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.

ಮಂಗಳವಾರದಂದು ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯ ವಿಧಾನಸಭೆಯಲ್ಲಿ ಯುಸಿಸಿ ವಿರುದ್ಧ ನಿರ್ಣಯವನ್ನು ಮಂಡಿಸಿ, ಇದು ಕೇಂದ್ರದ ಏಕಪಕ್ಷೀಯ ಮತ್ತು ಆತುರದ ಕ್ರಮ ಎಂದು

ಕರೆದಿದ್ದಾರೆ. ಮಾತ್ರವಲ್ಲ,  ಸಂಘ ಪರಿವಾರದ ನಿಲುವಿನ ಆಧಾರಿತ ಸಮಾನ ನಾಗರಿಕ ಸಂಹಿತೆಯು ದೇಶದ ಸಂವಿಧಾನದ ಅನುಸಾರವಾಗಿಲ್ಲ ಹಾಗೂ ಅದು ಹಿಂದುಗಳ ಮನುಸ್ಮೃತಿಯನ್ನು ಆಧರಿಸಿದೆ ಎಂದು ಹೇಳಿದ್ದಾರೆ. 


Leave a Comment