ಅಪಘಾತದಲ್ಲಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು

Coastal Bulletin
ಅಪಘಾತದಲ್ಲಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು

ಹಸನ್ ಎಂಬ 12 ವರ್ಷದ ಬಾಲಕ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಕುತ್ತಿಗೆ ಬುಡವು ಬೆನ್ನುಮೂಳೆಯ ಮೇನಿನ ಕಶೇರುಖಂಡದಿಂದ ಬೇರ್ಪಟ್ಟಿತ್ತು. ಹೀಗೆ ದೇಹದಿಂದ ಆಂತರಿಕವಾಗಿ ಬೇರ್ಪಟ್ಟ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿರುವ ಘಟನೆ ಇಸ್ರೇಲ್‌ನಲ್ಲಿ ನಡೆದಿದೆ.

ಈ ರೀತಿಯ ಶಸ್ತ್ರಚಿಕಿತ್ಸೆಯು ಮಾಡುವ ಸಂದರ್ಭದಲ್ಲಿ ಬಾಲಕನ ಬದುಕುಳಿಯುವಿಕೆಯ ಪ್ರಮಾಣವು ಕೇವಲ 50% ಆಗಿತ್ತು. ಆದರೆ ಶಸ್ತ್ರಚಿಕಿತ್ಸಕರು ತಂಡವು ಹುಡುಗನ ಜೀವವನ್ನು ಉಳಿಸುವುದನ್ನು ಸವಾಲಾಗಿ ಸ್ವೀಕರಿಸಿ. ದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಕೊನೆಗೂ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿ ಆತನ ಜೀವ

ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶಸ್ತ್ರಚಿಕಿತ್ಸೆಯ ವಿಧಾನವು ಅತ್ಯಂತ ಸವಾಲಿನ ಕೆಲಸದ್ದಾಗಿತ್ತು. ಹಾನಿಗೊಳಗಾದ ತಲೆ ಬುರುಡೆಯ ತಳಭಾಗದ ಪ್ರದೇಶದಲ್ಲಿ ಪ್ರಮುಖ ರಕ್ತನಾಳಗಳು ಹಾಗೇ ಉಳಿದುಕೊಂಡಿದ್ದವು. ದೀರ್ಘ ಪ್ರಕ್ರಿಯೆಯ ಹೊರತಾಗಿಯೂ, ಬಾಲಕನ ಕುತ್ತಿಗೆ ಯಾವುದೇ ವಸ್ತುವಿನ ಸಹಾಯವಿಲ್ಲದೇ ಕಾರ್ಯನಿರ್ವಹಿಸುತ್ತಿದೆ ಎಂದು ಮೂಳೆಚಿಕಿತ್ಸಕ ತಜ್ಞ ಡಾ.ಓಹಾದ್ ಐನಾವ್ ಹೇಳಿದ್ದಾರೆ. 


Leave a Comment