ಬಂಟ್ವಾಳ: ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಸೇವಾ ಶುಲ್ಕವನ್ನು ರಾಜ್ಯ ಮುಜರಾಯಿ ಇಲಾಖೆಯು ಹೆಚ್ಚಳ ಮಾಡಿರುವುದರಿಂದ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈವಕ್ಕೆ ಕೊಡುವ ಆಗೆಲು ಸೇವೆ ಮತ್ತು ಕೋಲ ಸೇವೆಗಳಿಗೂ ಮುಜರಾಯಿ ಇಲಾಖೆ ಏರಿಕೆ ಮಾಡಿದೆ.
ಆಗೆಲು ಸೇವೆಯ ರಶೀದಿ ಬೆಲೆಗೆ 25 ರೂ. ಇದ್ದದ್ದು 50 ರೂ.ಗೆ ಏರಿಸಲಾಗಿದ್ದು, ದೈವದ ಕೋಲದ ಸೇವೆಗೆ ಇದ್ದ 3000ರೂ ಬದಲಾಗಿ 5000ರೂ ಗೆ ಏರಿಕೆಯಾಗಿದೆ. ಅಲ್ಲದೆ ಉಚಿತವಾಗಿ ನಡೆಯುತ್ತಿದ್ದ ವಾಹನ ಪೂಜೆಗೆ 75 ರೂ.ಗಳ ದರ
ನಿಗದಿಪಡಿಸಲಾಗಿದೆ.
ಕ್ಷೇತ್ರದಲ್ಲಿ ಯಾವುದೇ ರೀತಿಯ ಬದಲಾವಣೆಯಾದರೂ ಕ್ಷೇತ್ರಕ್ಕೆ ಸಂಬಂಧಪಟ್ಟ ನಾಲ್ಕ ಮಾಗಣೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಪ್ರದಾಯವನ್ನು ಪಾಲಿಸಲಾಗುತ್ತಿತ್ತು, ಆದರೆ ಈ ಬಾರಿ ಜನರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ದರ ಹೆಚ್ಚಿಸಿರುವುದು ಭಕ್ತರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.















