ತುಮಕೂರು: ತೋಟದ ಮನೆಯಲ್ಲಿ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ಆಯತಪ್ಪಿ ಬಾವಿಗೆ ಬಿದ್ದ 7 ವರ್ಷದ ತಮ್ಮನನ್ನು ಆತನ 8 ವರ್ಷದ ಅಕ್ಕನೇ ಬಾವಿಗೆ ಹಾರಿ ಪ್ರಾಣ ರಕ್ಷಣೆ ಮಾಡಿದ ಸಾಹಸದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಈಕೆಯ ಹೆಸರು ಶಾಲೂ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದ ಮೂಲದ ಜೀತೇಂದ್ರ ಹಾಗೂ ರಾಜಕುಮಾರಿ ದಂಪತಿಗಳ ಮಕ್ಕಳಾದ ಹಿಮಾಂಶು ಹಾಗೂ ಶಾಲೂ ಆಟಿಕೆಗಾಗಿ ಕಿತ್ತಾಡುತ್ತಿದ್ದ ಸಂದರ್ಭ ಹಿಮಾಂಶು ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಅಕ್ಕ ಕೂಡಲೇ
ತಮ್ಮನ ರಕ್ಷಣೆಗಾಗಿ ಲೈಫ್ ಜಾಕೆಟ್ ಧರಿಸಿ ಬಾವಿಗೆ ಇಳಿದಿದ್ದಾರೆ.
ಮಕ್ಕಳ ಕಿರುಚಾಟವನ್ನು ಕೇಳಿ ಅಕ್ಕ-ಪಕ್ಕ ಮನೆಯವರು ಸಹಾಯಕ್ಕೆ ಮುಂದಾಗಿದ್ದು, ಇಬ್ಬರನ್ನು ಮೇಲಕೆತ್ತಿದ್ದಾರೆ. ಈಜು ತರಗತಿಗೆ ಹೋಗುತ್ತಿದ್ದ ಶಾಲೂವಿನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.















